ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳು ದಾಳಿ: ಸೊತ್ತು ವಶ
Update: 2024-08-28 21:12 IST
ಸಾಂದದರ್ಭಿಕ ಚಿತ್ರ
ಹಿರಿಯಡ್ಕ, ಆ.28: ಪೆರ್ಡೂರು ಗ್ರಾಮದ ಅಡಪಾಡಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಆ.27ರಂದು ದಾಳಿ ನಡೆಸಿದ ಗಣಿ ಇಲಾಖೆ ಅಧಿಕಾರಿಗಳು ಹಿಟಾಚಿ ಹಾಗೂ ಶಿಲೆಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.
ನಾಗರಾಜ ಮತ್ತು ಸಂತೋಷ್ ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಗಣಿಗಾರಿಕೆಗೆ ಪೊಲೀಸ್ ಅಧಿಕಾರಿಗಳ ಜೊತೆ ದಾಳಿ ನಡೆಸಿದ ಗಣಿ ಇಲಾಖೆಯ ಅಧಿಕಾರಿ ಹಾರೀಜಾ, ಸ್ಥಳದಲ್ಲಿದ್ದ ಹಿಟಾಚಿ ಮತ್ತು ಎರಡು ಟಿಪ್ಪರ್ ಲೋಡ್‌ನಷ್ಟು ಶಿಲೆ ಕಲ್ಲನ್ನು ವಶಕ್ಕೆ ಪಡೆದುಕೊಂಡಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.