×
Ad

ಪರ್ಕಳ: ಉಚಿತ ನೇತ್ರ ತಪಾಸಣಾ ಶಿಬಿರ

Update: 2026-01-28 19:28 IST

ಉಡುಪಿ, ಜ.28: ಚ್ಯಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಬೆಟ್ಟು ಹಾಗೂ ಶ್ರೀ ವಿಘ್ನೇಶ್ವರ ಸಭಾಭವನ ಪರ್ಕಳ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಜ.26ರಂದು ಪರ್ಕಳದ ಶ್ರೀವಿಘ್ನೇಶ್ವರ ಸಭಾಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನೇತ್ರತಜ್ಞ ಡಾ.ಕೃಷ್ಣಪ್ರಸಾದ್ ಕೂಡ್ಲು ಕಣ್ಣಿನ ಆರೋಗ್ಯದ ಮಹತ್ವದ ಬಗ್ಗೆ ಮಾತನಾಡಿದರು. ಅಧ್ಯಕ್ಷತೆಯನ್ನು ಜೇಸಿಐ ಪರ್ಕಳದ ಅಧ್ಯಕ್ಷ ಭರತ್ ಕೆ.ಕುಲಾಲ್ ವಹಿಸಿದ್ದರು. ಮಂಗಳ ಕಲಾ ಸಾಹಿತ್ಯ ವೇದಿಕೆಯ ಅಧ್ಯಕ್ಷ ನಟರಾಜ್ ಪರ್ಕಳ, ವಿಘ್ನೇಶ್ವರ ಸಭಾ ಭವನದ ಸಚ್ಚಿದಾನಂದ ನಾಯಕ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನರಸಿಂಹ ನಾಯಕ್, ಜೆಸಿಐ ಇಂಡಿಯಾದ ವಿಘ್ನೇಶ್ ರಾವ್ ಉಪಸ್ಥಿತರಿದ್ದರು.

ಶಿಬಿರದಲ್ಲಿ 150 ಜನರ ನೇತ್ರ ತಪಾಸಣೆ ನಡೆಸಿದರು. ಅವರಲ್ಲಿ 88 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 16 ಜನರಿಗೆ ದೃಷ್ಟಿ ಸುಧಾರಣೆಗೆ ಉಚಿತ ಕಣ್ಣಿನ ಪೊರೆ ಕಳಚುವ ಶಸ್ತ್ರಚಿಕಿತ್ಸೆಯ ದಿನಾಂಕ ನಿಗದಿ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News