×
Ad

ಪರ್ಕಳ | ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನಿಂದ ನ.16ರಂದು ಚಿಣ್ಣರ ಚಿತ್ರರಚನಾ ಸ್ಪರ್ಧೆ

Update: 2025-11-03 21:29 IST

ಪರ್ಕಳ : ಸ್ಥಳೀಯ ನೇತಾಜಿ ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆ 50 ವರ್ಷಗಳನ್ನು ಪೂರೈಸಿದ್ದು, ಸುವರ್ಣ ಮಹೋತ್ಸವ ಆಚರಿಸುವ ಹಿನ್ನೆಲೆಯಲ್ಲಿ ನ.16ರಂದು ಪರ್ಕಳದ ಸುರಕ್ಷಾ ಸಭಾಭವನದಲ್ಲಿ ಚಿಣ್ಣರ ಚಿತ್ರ ರಚನಾ ಸ್ಪರ್ಧೆಯನ್ನು ಏರ್ಪಡಿಸಲಿದೆ.

ಎಲ್‌ಕೆಜಿಯಿಂದ ಹತ್ತನೆ ತರಗತಿಯವರೆಗಿನ ಮಕ್ಕಳಿಗಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆ ಜರಗಲಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಸ್ಪರ್ಧಿಗಳು ಕ್ಯುಆರ್ ಕೋಡನ್ನು ಸ್ಕ್ಯಾನ್ ಮಾಡುವ ಮೂಲಕ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸ್ಥಳದಲ್ಲೇ ನೋಂದಣಿಗೂ ಅವಕಾಶವಿದೆ. ನೋಂದಣಿ ಉಚಿತವಾಗಿದ್ದು, ಸ್ಪರ್ಧಿಗಳು ಚಿತ್ರಬಿಡಿಸಲು ಬೇಕಾಗುವ ಪರಿಕರಗಳೊಂದಿಗೆ ಸ್ಪರ್ಧೆಯ ಸ್ಥಳದಲ್ಲಿ ಬೆಳಿಗ್ಗೆ 9:30ಕ್ಕೆ ಮೊದಲು ಹಾಜರಿರಬೇಕು.

ಭಾಗವಹಿಸುವ ಮಕ್ಕಳು ಸಂಯೋಜಕರು ನೀಡುವ ಹಾಳೆಯಲ್ಲಿ ತಮ್ಮಿಚ್ಛೆಯ ಚಿತ್ರಗಳನ್ನು ಬಿಡಿಸಬಹುದು. ಚಿತ್ರಕಲಾವಿದ ಸತೀಶ್ಚಂದ್ರ ಜಲವರ್ಣ ಚಿತ್ರ ರಚನಾ ಪ್ರಾತ್ಯಕ್ಷಿಕೆಯನ್ನು ನೀಡಲಿರುವರು. ಆರ್ಟಿಸ್ಟ್ ಫೋರಂ ಉಡುಪಿಯ ಕಲಾವಿದರು ತೀರ್ಪುಗಾರರಾಗಿ ಬಹುಮಾನ ವಿಜೇತ ಮಕ್ಕಳನ್ನು ಆಯ್ಕೆ ಮಾಡಲಿದ್ದಾರೆ ಎಂದು ಕ್ಲಬ್ಬಿನ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News