ಕ್ರೇನ್ ಢಿಕ್ಕಿ: ಪಾದಚಾರಿ ಮೃತ್ಯು
Update: 2025-08-05 20:31 IST
ಹೆಬ್ರಿ, ಆ.5: ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಮುದ್ರಾಡಿ ಜಂಕ್ಷನ್ ಬಳಿ ನಡೆದಿದೆ.
ಮೃತರನ್ನು ಚಣಿಲ(75) ಎಂದು ಗುರುತಿಸಲಾಗಿದೆ. ಹೆಬ್ರಿ ಕಡೆಯಿಂದ ಬರುತ್ತಿದ್ದ ಹೈಡ್ರಾ ಕ್ರೇನ್ ವೇಗ ಹಾಗೂ ಅಜಾರೂಕತೆಯಿಂದ ಬಂದು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಚಣಿಲ ಅವರಿಗೆ ಢಿಕ್ಕಿ ಹೊಡೆಯಿತ್ತೆ ನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದ ಚಣಿಲರ ಮೇಲೆ ಕ್ರೇನ್ ಚಕ್ರ ಹರಿಯಿತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.