×
Ad

ಶೈಲಜಾ ಬಾಯರಿಗೆ ಪಿಎಚ್‌ಡಿ ಪದವಿ

Update: 2025-11-03 21:26 IST

ಮಣಿಪಾಲ, : ಮಣಿಪಾಲ ಮಾಧವಕೃಪಾ ಶಾಲೆಯ ಗಣತಿ ಶಿಕ್ಷಕಿ ಶೈಲಜಾ ಬಾಯರಿ ಅವರು ಮಂಡಿಸಿದ ಶಾಲೆಗಳಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಣಿಪಾಲ ಮಾಹೆ ವಿವಿ ಪಿಎಚ್‌ಡಿ ಪ್ರದಾನ ಮಾಡಿದೆ.

ಶೈಲಜಾ ಬಾಯರಿ ಅವರು ಈಗ ಪುಣೆಯ ಸಿಂಬಯೋಸಿಸ್ ವಿವಿಯಲ್ಲಿ ಡೀನ್ ಆಗಿರುವ ಡಾ.ನೀತಾ ಇನಾಂದಾರ್ ಇವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಕ್ರಿಯಾತ್ಮಕ ಶೈಕ್ಷಣಿಕ ಸಂಶೋಧನೆಯಲ್ಲಿ ಸಕ್ರಿಯರಾಗಿರುವ ಬಾಯರಿ, ರಚನಾತ್ಮಕ ಗಣಿತ ಯೋಜನೆ, ಬೋಧನಾ ಸಂಶೋಧನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮಣಿಪಾಲ ಎಂಐಟಿಯ ಬಯೋಮೆಡಿಕಲ್ ವಿಭಾಗದ ಪ್ರೊ.ಡಾ.ಮುರಲೀಧರ ಬಾಯರಿ ಅವರ ಪತ್ನಿಯಾಗಿರುವ ಶೈಲಜಾ ಡಾ.ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿನಿ. ನ.21ರಂದು ನಡೆಯುವ ಮಹೆ ಘಟಿಕೋತ್ಸವದಲ್ಲಿ ಇವರು ತಮ್ಮ ಪಿಎಚ್‌ಡಿ ಪದವಿ ಸ್ವೀಕರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News