ಲಾಡ್ಜ್, ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ: ಓರ್ವನ ಬಂಧನ
Update: 2025-08-25 20:48 IST
ಉಡುಪಿ, ಆ.25: ನಗರದ ಲಾಡ್ಜ್‌ವೊಂದಕ್ಕೆ ಆ.24ರಂದು ದಾಳಿ ನಡೆಸಿದ ಉಡುಪಿ ನಗರ ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಸಂತ್ರಸ್ತ ಮಹಿಳೆಯನ್ನು ರಕ್ಷಿಸಿದ್ದಾರೆ.
ಶರತ್ ಯಾನೆ ಮೊಹಮ್ಮದ್ ಫಯಾಝ್ ಬಂಧಿತ ಆರೋಪಿ. ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ್, ನಗರದ ಸಮ್ಮರ್ ಪಾರ್ಕ್ ಹೋಟೆಲ್‌ಗೆ ದಾಳಿ ನಡೆಸಿ, ರೂಮ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಶರತ್ ಯಾನೆ ಮೊಹಮ್ಮದ್ ಫಯಾಜ್‌ನನ್ನು ಬಂಧಿಸಿದರು.
ಈತ ಮಹಿಳೆಯನ್ನು ಆ.19ರಂದು ಉಡುಪಿಗೆ ಕೆಲಸ ಕೊಡಿಸುವುದಾಗಿ ಕರೆ ತಂದು ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿಸಿಕೊಟ್ಟು ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುತ್ತಿದ್ದ ಎಂದು ದೂರಲಾಗಿದೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.