×
Ad

ರಂಗೋಲಿ ಕಲಾವಿದೆ ಡಾ.ಭಾರತಿ ಮರವಂತೆಗೆ ರಾಜ್ಯೋತ್ಸವ ಪ್ರಶಸ್ತಿ

Update: 2026-01-02 18:41 IST

ಉಡುಪಿ, ಜ.2: ರಂಗೋಲಿ ಕಲಾವಿದೆ ಹಾಗೂ ಸಂಶೋಧಕಿ ಡಾ.ಭಾರತಿ ಮರವಂತೆಯವರಿಗೆ ರಾಷ್ಟ್ರೀಯ ದೃಶ್ಯ ಕಲಾ ಅಕಾಡೆಮಿ ಧಾರವಾಡ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಧಾರವಾಢದ ಜೆ.ಎಸ್.ಎಸ್. ಹಾಲಭಾವಿ ಸ್ಕೂಲ್ ಆಫ್ ಆರ್ಟ್‌ನಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತಿ ಮರವಂತೆ ರಂಗೋಲಿಯಲ್ಲಿ ಸಂಶೋಧನೆ, ರಂಗೋಲಿ ಪೈಂಟಿಂಗ್, ರಂಗೋಲಿ ಪ್ರದರ್ಶನ ಪ್ರಾತ್ಯಕ್ಷಿಕೆ, ಶ್ರೀರಂಗೋಲಿ ಪತ್ರಿಕೆ, ಲೇಖನಗಳು, ಉಪನ್ಯಾಸ, ಕೃತಿಗಳು, ನಿಘಂಟು, ಕಿರುಯೋಜನೆ ಗಳು, ರಂಗೋಲಿಯಲ್ಲಿ ವಿಶ್ವದಾಖಲೆ, ಕಲಾವಿದರ ಫೆಲೋಶಿಪ್, ಸ್ವರಚಿತ ರಂಗೋಲಿ ಇತ್ಯಾದಿ ಕಲಾಕ್ಷೇತ್ರದ ಕೆಲಸಕ್ಕಾಗಿ ಈ ಪ್ರಶಸ್ತಿ ಬಂದಿದೆ. ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸಿದ ಅನುಭವವಿ ರುವ ಇವರು ಪ್ರಸ್ತುತ ಡಾ.ಶಿವರಾಮ ಕಾರಂತ ಟ್ರಸ್ಟ್‌ನಲ್ಲಿ ಸದಸ್ಯೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News