×
Ad

ಪ್ರತ್ಯೇಕ ಪ್ರಕರಣ: ಬಾವಿಗೆ ಹಾರಿ ಎರಡು ಮಂದಿ ಆತ್ಮಹತ್ಯೆ

Update: 2023-09-19 19:28 IST

ಕುಂದಾಫುರ: ವಿಪರೀತ ಶರಾಬು ಕುಡಿಯುವ ಚಟ ಹೊಂದಿದ್ದ ಕೊಟೇಶ್ವರದ ಮಠದ ಬೆಟ್ಟು ನಿವಾಸಿ ಮಂಜುನಾಥ(55) ಎಂಬವರು ಮಾನಸಿಕವಾಗಿ ನೊಂದು ಜೀವನದಲ್ಲಿ ಜುಗುಪ್ಸೆಗೊಂಡು ಸೆ.18ರಂದು ಬೆಳಗ್ಗೆ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ: ಹೆಂಡತಿ ಮೃತಪಟ್ಟ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಬೊಮ್ಮರಬೆಟ್ಟು ಗ್ರಾಮದ ಕಲ್ಲುಗುಡ್ಡೆ ನಿವಾಸಿ ಬಾಲಕೃಷ್ಣ ಪೂಜಾರಿ(80) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.18ರಂದು ಮಧ್ಯಾಹ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News