ಉಡುಪಿ: ಹುತಾತ್ಮರಿಗೆ ಗೌರವ ಸಮರ್ಪಣೆ
Update: 2025-08-15 19:10 IST
ಉಡುಪಿ: ನಗರದ ಅಜ್ಜರಕಾಡು ಪಾರ್ಕಿನಲ್ಲಿರುವ ಹುತಾತ್ಮರ ಯುದ್ದ ಸ್ಮಾರಕಕ್ಕೆ ಇಂದು ಮುಂಜಾನೆ ಭೇಟಿ ನೀಡಿದ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಹುತಾತ್ಮರಿಗೆ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಸೈನಿಕರ ವೇದಿಕೆಯ ಅಧ್ಯಕ್ಷ ಕರ್ನಲ್ ರಾಡ್ರಿಗಸ್, ಗಣಪಯ್ಯ ಸೇರಿಗಾರ್, ಸುಂದರ ಬಂಗೇರ, ದಯಾನಂದ ಪೂಜಾರಿ, ಗಣೇಶ್ ರಾವ್, ಮಾಜಿ ಸೈನಿಕರ ಸೊಸೈಟಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪರಮಶಿವ, ಮಾಜಿ ಸೈನಿಕರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.