×
Ad

ಉಡುಪಿ: ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ಬ 'ಮಹಿಷೋತ್ಸವ'ಕ್ಕೆ ಚಾಲನೆ

Update: 2023-10-15 11:50 IST

ಉಡುಪಿ, ಅ.15: ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ವತಿಯಿಂದ ಇಂದು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾದ ಮೂಲನಿವಾಸಿಗಳ ಸಾಂಸ್ಕೃತಿಕ ಹಬ್ನ 'ಮಹಿಷೋತ್ಸವ'ಕ್ಕೆ ಚಾಲನೆ ನೀಡಲಾಯಿತು.

ಉಡುಪಿ ಜಿಲ್ಲಾಡಳಿತ ನಿಷೇಧಾಜ್ಞೆ ವಿಧಿಸಿ ಮೆರವಣಿಗೆ ಹಾಗೂ ಬ್ಯಾನರ್ ಅಳವಡಿಕೆಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಭವನದ ಆವರಣದೊಳಗೆಯೇ ಆಯೋಜಿಸಲಾದ ಮಹಿಷೋತ್ಸವ ಮೆರವಣಿಗೆಗೆ ಸಂಶೋಧಕ, ಬರಹಗಾರ ವಿಠಲ್ ವಗ್ಗನ್ ಚಾಲನೆ ನೀಡಿದರು

ಈ ಸಂಧರ್ಭದಲ್ಲಿ ಚಿಂತಕ‌ ನಾರಾಯಣ ಮಣೂರು, ಹೋರಾಟಗಾರ ಶ್ರೀರಾಮ ದಿವಾಣ, ಜಯನ್ ಮಲ್ಪೆ, ಯುವ ಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್, ಲೋಕೇಶ್ ಪಡುಬಿದ್ರಿ, ಶೇಖರ ಹೆಜ್ಮಾಡಿ, ದಯಾನಂದ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಅಂಬೇಡ್ಕರ್ ಭವನದಲ್ಲಿ ಬಿಗಿ‌ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಅಲ್ಲದೆ ಕೆಎಸ್ ಆರ್ ಪಿ ತುಕಡಿಯನ್ನು‌ ನಿಯೋಜಿಸಲಾಗಿದೆ.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News