ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಅಧ್ಯಕ್ಷರಾಗಿ ಇಬಾದ್ ಆಯ್ಕೆ
ಉಡುಪಿ, ನ.23: ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆ ಮಲ್ಪೆಯಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯಲ್ಲಿ ಜಿಲ್ಲಾಧ್ಯಕ್ಷ ನಕ್ವಾ ಯಾಹ್ಯಾ, ಪ್ರಧಾನ ಕಾರ್ಯದರ್ಶಿ ಫಾಝಿಲ್ ಆದಿಉಡುಪಿ, ಜಂಟಿ ಕಾರ್ಯದರ್ಶಿ ನಿಹಾರ್ ಅಹ್ಮದ್ ಕುಂದಾಪುರ ಮತ್ತು ಅಶ್ರಫ್ ಪಡುಬಿದ್ರಿ, ಮಾಜಿ ಜಿಲ್ಲಾಧ್ಯಕ್ಷ ಮುಷ್ತಾಕ್ ಬೆಳ್ವೆ, ಟ್ರಸ್ಟಿ ಪೀರು ಭಾಯಿ ಉಪಸ್ಥಿತರಿದ್ದರು.
ನಂತರ ತಾಲೂಕು ಉಸ್ತುವಾರಿ ನಜೀರ್ ಸಾಹೇಬ್ ನೇಜಾರು, ಚುನಾವಣಾ ಅಧಿಕಾರಿ ಅಶ್ರಫ್ ಪಡುಬಿದ್ರಿ ಮತ್ತು ತಾಜುದ್ದೀನ್ ಬ್ರಹ್ಮಾವರ ಉಡುಪಿ ತಾಲೂಕು ಸಮಿತಿ ರಚನೆಯ ಪ್ರಕ್ರಿಯೆ ನಡೆಸಿಕೊಟ್ಟರು.
2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಇಬಾದ್ ಉಸ್ಮಾನ್, ಉಪಾಧ್ಯಕ್ಷರಿಗೆ ಅಕ್ರಮಾಲಿ, ಪ್ರಧಾನ ಕಾರ್ಯದರ್ಶಿಯಾಗಿ ಇಫ್ತಿಕಾರ್ ಅಹಮದ್, ಜಂಟಿ ಕಾರ್ಯದರ್ಶಿಯಾಗಿ ಬಿಲಾಲ್ ಸಾಗರ, ಕೋಶಾಧಿಕಾರಿಯಾಗಿ ಅಮಾನುಲ್ಲಾ, ಸಂಘಟನಾ ಕಾರ್ಯದರ್ಶಿಯಾಗಿ ಶಾಮು ಅಹಮದ್, ತಾಲೂಕು ಸಮಿತಿ ಸದಸ್ಯರುಗಳಾಗಿ ಅವೇಜ ಶೇಖ್, ಇಮ್ತಿಯಾಜ್, ಮುಮ್ತಾಜ್ ಅಲಿ ಹಾರೂನ್ ರಶೀದ್ ಆತ್ರಾಡಿ ಆಯ್ಕೆಯಾದರು.