×
Ad

ಉಡುಪಿ: ಹಿರಿಯ ಪತ್ರಕರ್ತ ಎಚ್.ಮಂಜುನಾಥ ಭಟ್ ನಿಧನ

Update: 2025-08-17 13:22 IST

ಉಡುಪಿ, ಆ.17: ಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ (72) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಬ್ರಹ್ಮಾವರ ತಾಲೂಕಿನ ಹಾರ್ಯಾಡಿಯಲ್ಲಿ 1953ರಲ್ಲಿ ಜನಿಸಿದ ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಒಂದೆರಡು ವರ್ಷ ಹೈಸ್ಕೂಲ್ ಶಿಕ್ಷಕರಾಗಿದ್ದರು. 1977ರಲ್ಲಿ ಮಂಗಳೂರಿನ 'ನವಭಾರತ'ದ ಮೂಲಕ ಪತ್ರಿಕಾ ವೃತ್ತಿ ಪ್ರಾರಂಭಿಸಿದ ಮಂಜುನಾಥ್ ಭಟ್, ಮುಂದೆ ಮುಂಗಾರು, ಕನ್ನಡ ಜನ ಅಂತರಂಗ ಹಾಗೂ ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರು, ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು.

ನಿವೃತ್ತಿಯ ಬಳಿಕ ಬೆಂಗಳೂರಿಗೆ ತೆರಳಿದ ಅವರು ಉತ್ಥಾನ ಮಾಸಪತ್ರಿಕೆ ಹಾಗೂ ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕೀಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಅವರು ಹಲವು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಅಲ್ಲದೇ ಎಂಜಿಎಂ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಪ್ರೊ.ಬಿ.ವಿ.ಆಚಾರ್ಯ ಸೇರಿದಂತೆ ಹಲವರ ಜೀವನಚರಿತ್ರೆಯ ಸಂಪಾದಕರಾಗಿ ಅವರು ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News