×
Ad

ಉಡುಪಿ: ಮೀಲಾದುನ್ನಬಿ ಪ್ರಯುಕ್ತ ಸಾಮಾಜಿಕ ಸೇವೆ

Update: 2023-09-29 23:07 IST

ಉಡುಪಿ: ಮೀಲಾದುನ್ನಬಿ ಪ್ರಯುಕ್ತ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಅಲ್- ಇಹ್ಸಾನ್ ದಅವಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಇದರ ವತಿಯಿಂದ ಉಡುಪಿ ಜಿಲ್ಲಾ ಆಸ್ಪತ್ರೆ ಹಾಗೂ ಸಾದತ್ ವೃದ್ಧಾಶ್ರಮ ಮಲ್ಲಾರ್ ಮತ್ತು ಉಡುಪಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲು, ಅನ್ನದಾನ ವಿತರಿಸಿ ಆರೋಗ್ಯವನ್ನು ವಿಚಾರಿಸಿದರು.

ಮರ್ಕಝು ತಅಲಿಮಿಲ್ ಮೂಳೂರು ಪ್ರ. ವ್ಯವಸ್ಥಾಪಕರಾದ ಯು.ಕೆ ಮುಸ್ತಫ ಸಅದಿ, ಅಲ್- ಇಹ್ಸಾನ್ ದಅವಾ ಕಾಲೇಜು ಪ್ರಾಂಶುಪಾಲರಾದ ಸ್ವಾಬಿರ್ ಸಅದಿ ಅಲ್-ಅಸ್ನವೀ, ಪ್ರಧಾನ ಮುದರ್ರಿಸರಾದ ಉನೈಸ್ ಅಹ್ಸನೀ ಹಾಗೂ ಅಲ್- ಇಹ್ಸಾನ್ ಎಜ್ಯುಕೇಶನಲ್ ಸೆಂಟರ್ ಸಿಬ್ಬಂದಿಗಳಾದ ಮಾಸ್ಟರ್ ಕಲಂದರ್, ಫೈಝಲ್ ಹಿಮಾಮಿ ಸಖಾಫಿ, ಇಸ್ಮಾಯಿಲ್ ಇಹ್ಸಾನೀ ಹಾಗೂ ಅಲ್- ಇಹ್ಸಾನ್ ದಅವಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಇದರ ಭಾರವಾಹಿಗಳು ಉಪಸ್ಥಿತರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News