×
Ad

ಉಡುಪಿ | ಹಳೆ ಬ್ಯಾಂಕ್ ಖಾತೆಯ ಹಸ್ತಾಂತರಕ್ಕೆ ವಿಶೇಷ ಶಿಬಿರ ಪ್ರಾರಂಭ

Update: 2025-11-14 22:59 IST

ಉಡುಪಿ, ನ.14: ಭಾರತ ಹಣಕಾಸು ಸಚಿವಾಲಯದ ಮಾರ್ಗಸೂಚಿಯಂತೆ ದೀರ್ಘ ಕಾಲದವರೆಗೆ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿಗಳು, ವಿಮಾ ಕಂತುಗಳು ಹಾಗೂ ಷೇರುಗಳನ್ನು ಅವರ ವಾರಸುದಾರರಿಗೆ ಕಾನೂನುಬದ್ದವಾಗಿ ಹಸ್ತಾಂತರಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪಂಚಾಯತ್, ಆರ್‌ಬಿಐ, ಲೀಡ್ ಬ್ಯಾಂಕ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕುಗಳ ಆಶ್ರಯದಲ್ಲಿ ವಿಶೇಷ ಶಿಬಿರವು ಇಂದು ಮಣಿಪಾಲದ ಜಿಲ್ಲಾ ಪಂಚಾಯತ್ ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಶಿಬಿರವನ್ನು ಜಿಪಂ ಮುಖ್ಯ ಲೆಕ್ಕಾಧಿಕಾರಿ ನಿಶ್ಚಿತ್ ಹೆಗ್ಡೆ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 78 ಕೋಟಿ ರೂ. ಮೌಲ್ಯದ ನಿಷ್ಕ್ರಿಯ ಗೊಂಡ ಖಾತೆಗಳಿವೆ. ಆ ಖಾತೆಯಲ್ಲಿರುವ ಹಣವನ್ನು ವಾರಸುದಾರರಿಗೆ ತಲುಪಿಸುವ ಉದ್ದೇಶದಿಂದ ಈ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲಾ ಬ್ಯಾಂಕ್ ಗಳು, ವಿಮೆ ಮತ್ತು ಇತರ ವಲಯಕ್ಕೆ ಸಂಬಂಧಿಸಿದ ಕಚೇರಿ ಶಾಖೆಗಳಲ್ಲಿ ಡಿ.31ರವರೆಗೆ ವಿಶೇಷ ಶಿಬಿರ ವನ್ನು ಆಯೋಜಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದವರು ಹೇಳಿದರು.

ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಠೇವಣಿ ಪಡೆಯುವ ಕುರಿತಾದ ಮಾಹಿತಿಯುಳ್ಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಆರ್‌ಬಿಐನ ಎಜಿಎಂ ನಿಶಾ ಠಾಕೂರ್, ಕೆನರಾ ಬ್ಯಾಂಕ್ ನ ಅರ್ಚನಾ, ಲೀಡ್ ಬ್ಯಾಂಕ್ ಮೆನೇಜರ್ (ಪ್ರಭಾರ) ಕೆ. ಎಸ್. ಮಹಾದೇವಪ್ಪ, ಉಡುಪಿ ಜಿಪಂ ಯೋಜನಾಧಿಕಾರಿ ವಿಜಯಕುಮಾರ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು, ಎಲ್ಐಸಿ ಅಧಿಕಾರಿ ಗಳು, ಗ್ರಾಹಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News