×
Ad

ವಿಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಪಂದ್ಯ: ಭಾರತದ ಬಾಲಕಿಯರ ತಂಡಕ್ಕೆ ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆ

Update: 2025-11-20 12:05 IST

ಕಾರ್ಕಳ : ಚೀನಾದ ಶಾಂಗ್ಲೋದಲ್ಲಿ ಡಿ.3 ರಿಂದ 13 ವರೆಗೆ ನಡೆಯಲಿರುವ ವಿಶ್ವ ಶಾಲಾ ಮಕ್ಕಳ 15 ವರ್ಷ ಒಳಗಿನ ವಯೋಮಿತಿಯ ವಾಲಿಬಾಲ್ ಪಂದ್ಯಾಟದಲ್ಲಿ ಭಾರತದ ಬಾಲಕಿಯರ ತಂಡ ಭಾಗವಹಿಸಲಿದ್ದು, ಈ ತಂಡಕ್ಕೆ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.

ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ಅ.24 ರಿಂದ ರಾಂಚಿಯಲ್ಲಿ ನಡೆದ ಅಯ್ಕೆ ತರಬೇತಿ ಶಿಬಿರದಲ್ಲಿ ಅಂತಿಮವಾಗಿ ಶಗುನ್ ಆಯ್ಕೆ ನಡೆದಿದ್ದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿರುವ 12 ಆಟಗಾರರಲ್ಲಿ ಶಗುನ್ ವರ್ಮ ಹೆಗ್ಡೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಆಟಗಾರ್ತಿಯಾಗಿದ್ದಾರೆ.

ಶಗುನ್ ಎಸ್. ವರ್ಮ ಹೆಗ್ಡೆ ಶೃತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ'ಸೋಜಾ, ಜೀವನ್ ಡಿ' ಸಿಲ್ವಾ, ಜೈರಾಜ್ ಪೂಜಾರಿ ಹಾಗೂ ಎಸ್. ಡಿ. ಎಮ್ ಉಜಿರೆಯ ರಮೇಶ್ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News