×
Ad

ಯುವನಿಧಿ ಯೋಜನೆ: ಸ್ವಯಂ ಘೋಷಣೆ ಕಡ್ಡಾಯ

Update: 2025-11-11 21:32 IST

ಉಡುಪಿ, ನ.11: 2024-25ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಯಾವುದೇ ಡಿಪ್ಲೋಮಾ ಪದವಿ ಪಡೆದು ನಿರುದ್ಯೋಗಿಯಾಗಿರುವ ಅರ್ಹರು ಯುವನಿಧಿ ಯೋಜನೆಯ ಮೂಲಕ ಪ್ರತಿ ತಿಂಗಳು 3,000ರೂ. (ಪದವೀಧರ ನಿರುದ್ಯೋಗಿಗಳಿಗೆ) ಹಾಗೂ 1,500ರೂ.(ಡಿಪ್ಲೋಮಾ ಪಡೆದ ನಿರುದ್ಯೋಗಿಗಳಿಗೆ) ನೇರ ನಗದು ಪಡೆಯುತ್ತಿದ್ದಾರೆ.

ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕದ ಬದಲಾಗಿ ಇನ್ನು ಮುಂದೆ ಪ್ರತಿ ತಿಂಗಳು ನವಂಬರ್ 1ರಿಂದ 25ರೊಳಗೆ ಕಡ್ಡಾಯವಾಗಿ ಆನ್ ಲೈನ್‌ ಲಾಗಿನ್ ಆಗಿ ಸ್ವಯಂ ಘೋಷಣೆ ನೀಡಬೇಕು. ಸ್ವಯಂ ಘೋಷಣೆ ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ. ಆದ್ದರಿಂದ ಫಲಾನುಭವಿಗಳು ತಪ್ಪದೇ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್ ಲೈನ್‌ ಮೂಲಕ ಸ್ವಯಂ ಘೋಷಣೆ ನೀಡುವಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಬಿ. ಬ್ಲಾಕ್ ರೂ ನಂಬರ್ 201 ಮೊದಲನೆ ಮಹಡಿ ರಜತಾದ್ರಿ ಮಣಿಪಾಲ ಅಥವಾ ದೂ.ಸಂ: 0820-2574869 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News