×
Ad

ಭಟ್ಕಳ| ಗಾಂಜಾ, MDMA ಮಾರಾಟ ಆರೋಪ: 4 ಮಂದಿ ಸೆರೆ

Update: 2024-10-26 18:48 IST

ಭಟ್ಕಳ: ನಿಷೇಧಿತ ಗಾಂಜಾ ಮತ್ತು MDMA ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭಟ್ಕಳದ ಮಗ್ದುಂ ಕಾಲೋನಿಯ ಜೀಯಾಮ್ (19), ನೌಮಾನ (25), ಫರ್ಹಾನ್ (25), ಬೇಳ್ನಿ ಬಂದರ ನಿವಾಸಿ ನಸರುದ್ದೀನ ಶೇಖ್ (24) ಎಂದು ಗುರುತಿಸಲಾಗಿದೆ.

ಪೊಲೀಸರು ಆರೋಪಿಗಳು ಬಳಸುತ್ತಿದ್ದ ಕಾರು, 15,000 ರೂ. ಮೌಲ್ಯದ 370 ಗ್ರಾಂ ನಿಷೇಧಿತ ಗಾಂಜಾ ಮತ್ತು 3,000 ರೂ. ಮೌಲ್ಯದ MDMA (methamphetamine) ಮಾದಕ ಪದಾರ್ಥಗಳೊಂದಿಗೆ ಇತರ ವಸ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ನವೀನ್ ನಾಯ್ಕ ಮತ್ತು ತಂಡದ ಸಿಬ್ಬಂದಿ ಪ್ರಮುಖ ಪಾತ್ರವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News