×
Ad

ರಸ್ತೆ ಸುರಕ್ಷತೆ ಕುರಿತು ಕಲಾಕೃತಿಗಳ ಸ್ಪರ್ಧೆ: 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅದ್ಭುತ ಪ್ರದರ್ಶನ

Update: 2025-12-02 14:40 IST

ಭಟ್ಕಳ: ನಗರದ ಸಾಗರ್ ರಸ್ತೆ ಟ್ರೀ ಪಾರ್ಕ್‌ನಲ್ಲಿ ಭಾನುವಾರ ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಭಟ್ಕಳ ನಗರ ಪೊಲೀಸ್ ಠಾಣೆ ಹಾಗೂ ಎಸ್–ಆರ್ಟ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕಾರ್ಯಕ್ರಮವನ್ನು ಮಜ್ಲಿಸೆ ಇಸ್ಲಾಹ್ ವ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಆರ್‌ಟಿಒ ಸಹಯೋಗದಲ್ಲಿ ಚಾಲನಾ ಪರವಾನಗಿ ಶಿಬಿರವನ್ನು ಸರ್ಕಾರ ನಿಗದಿಪಡಿಸಿರುವ ಶುಲ್ಕದೊಂದಿಗೆ ನಡೆಸಲಾಗುವುದು ಎಂದು ಘೋಷಿಸಿದರು.

ಈ ಸಂದರ್ಭ ಮಾತನಾಡಿದ ಭಟ್ಕಳ ಟೌನ್ ಪೊಲೀಸ್ ಇನ್‌ಸ್ಪೆಕ್ಟರ್ ದಿವಾಕರ್ ಅವರು, ಟ್ರಾಫಿಕ್ ನಿಯಮಗಳ ಅರಿವು ಮೂಡಿಸಲು ಇಲಾಖೆ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ವಾರಗಳಲ್ಲಿ ಸೈಬರ್ ಅಪರಾಧ ಜಾಗೃತಿಗಾಗಿ ವಿಶೇಷ ಅಭಿಯಾನ ಆರಂಭಿಸಲಾಗುವುದು ಎಂದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ತಂಝೀಮ್‌ನ ಸಕ್ರಿಯ ಸದಸ್ಯ ವಕೀಲ ಇಮ್ರಾನ್ ಲಂಕಾ ಮಾತನಾಡಿ, ಹೆಲ್ಮೆಟ್ ಧಾರಣೆ ಸೇರಿದಂತೆ ಟ್ರಾಫಿಕ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಬಹುಮಾನಕ್ಕಿಂತ ಭಾಗವಹಿಸುವಿಕೆ ಮತ್ತು ಜಾಗೃತಿಯೇ ಮುಖ್ಯವೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೊಲೀಸ್ ಉಪನಿರೀಕ್ಷಕ ತಿಮ್ಮಪ್ಪ, ಎಸ್-ಆರ್ಟ್ಸ್ ಪ್ರತಿನಿಧಿಗಳಾದ ಸಾಲೀಮ್, ಸುಲೈಮ್, ಕಲಾವಿದ ದರ್ಶನ್ ಮಹಬಲೇಶ್ವರ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಸ್ಪರ್ಧೆಯ ಫಲಿತಾಂಶಗಳು

ವರ್ಗ 1: ತರಗತಿ 1–4

ಬಾಲಕರು: 1) ಯಾಸಿನ್ ಜುಬಾಪು, 2) ಪ್ರಣೀತ್ ಎಂ., 3) ವೇದಾಂತ್ ಡಿ.

ಬಾಲಕಿಯರು: 1) ಧಾನ್ವಿ ಲಕ್ಷ್ಮೇಶ್ ನಾಯ್ಕ, 2) ದಿಶಿತಾ ಎಂ. ನಾಯ್ಕ, 3) ಸಿಯಾ

ವರ್ಗ 2: ತರಗತಿ 5–7

ಬಾಲಕರು: 1) ಚರಣ್ ಎಂ. ನಾಯ್ಕ, 2) ಮಯಾಂಕ್ ಎಂ. ಮೋಗೇರ್, 3) ಅನುಜ್ ಹೊಸಕಟ್ಟಾ

ಬಾಲಕಿಯರು: 1) ಫಾತಿನಾ, 2) ಜಹರಾ ಅಬುಹುರೇನ್, 3) ಇಸ್ರಾ

ವರ್ಗ 3: ತರಗತಿ 8–10

ಬಾಲಕರು: 1) ಹರ್ಷದ್ ಎಂ. ಗೊಂಡಾ, 2) ಸುಶಾಂತ್ ಪಿ. ಶೆಟ್, 3) ನಿತೀಶ್ ಆರ್. ದೇವಡಿಗ

ಬಾಲಕಿಯರು: 1) ಫಾತಿಮಾ ಮುಸ್ಕಾನ್, 2) ಅಮಾರಾ ಶಾರಾ, 3) ಆಯಿಷಾ ತಮನ್ನಾ

ವರ್ಗ 4: ಕಾಲೇಜು ಮತ್ತು ಸಾರ್ವಜನಿಕ (ಪುರುಷರು)

 ಹೇಮಂತ್ ಪ್ರಕಾಶ್ ಮಡಿವಾಳ, 2) ನಾಗರಾಜ್ ಶಿರಾಲಿ, 3) ಕಾರ್ತಿಕ್ ಎಂ. ಗೊಂಡಾ




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News