ರಾಜ್ಯಮಟ್ಟದ ಕರಾಟೆ ಸ್ಪರ್ಧೆ: ರಾಹುಲ್ ವಿನಾಯಕ್ ನಾಯ್ಕಗೆ ಪ್ರಥಮ ಸ್ಥಾನ
Update: 2024-11-28 21:03 IST
ಭಟ್ಕಳ: ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಕರಾಟೆ ಸ್ಪರ್ಧೆ ಯಲ್ಲಿ ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿ ರಾಹುಲ್ ವಿನಾಯಕ್ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೈಸೂರಿನ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 62 ಕೆ.ಜಿ ಒಳಗಿನ ವಿಭಾಗದಲ್ಲಿ ರಾಹುಲ್ ನಾಯ್ಕ ಬೆಂಗಳೂರು ಗ್ರಾಮಾಂತರ ಶಾಲಾ ವಿದ್ಯಾರ್ಥಿಯನ್ನು ಸೋಲಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.
ಈತ ನಗರದ ನಾಗಪ್ಪ ನಾಯ್ಕ ರಸ್ತೆಯ ನಿವಾಸಿ ವಿನಾಯಕ ನಾಯ್ಕ ಹಾಗೂ ಕಮಲಾ ನಾಯ್ಕ ದಂಪತಿಯ ಪುತ್ರ. ಈತನ ಸಾಧನೆಗೆ ಊರವರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದ್ದಾರೆ.