×
Ad

ಅಂಕೋಲಾ: ವಿದ್ಯುತ್ ತಂತಿ ತಗುಲಿ ಯುವಕ ಮೃತ್ಯು

Update: 2025-05-22 20:00 IST

ಮಹಾಂತೇಶ್ ಬಾನಾವಳಿಕರ್

ಅಂಕೋಲಾ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತಪಟ್ಟ ಘಟನೆ ಅಂಕೋಲಾ ತಾಲೂಕಿನ ಅವರ್ಸಾದ ದಾಂಡೆಭಾಗದಲ್ಲಿ ಗುರುವಾರ ಸಂಭವಿಸಿದೆ.

ಮಹಾಂತೇಶ್ ಬಾನಾವಳಿಕರ್ (25 ವರ್ಷ) ಮೃತಪಟ್ಟ ಯುವಕ.

ಭಾರೀ ಗಾಳಿ ಮಳೆಯಿಂದಾಗಿ ನಡೆದುಕೊಂಡು ಹೋಗುವ ಓಣಿಯೊಂದರಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಗುರುವಾರ ಮಧ್ಯಾಹ್ನ 2.30ರ ವೇಳೆ ಮಹಾಂತೇಶ ಅಂಗಡಿಯಿಂದ ಮನೆಗೆ ಓಣಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News