×
Ad

ಹೊಸಪೇಟೆಯಲ್ಲಿ ‘ಹರ್‌ಘರ್ ತಿರಂಗ್’ ಜಾಗೃತಿ ಬೈಕ್ ರ‍್ಯಾಲಿ

Update: 2025-08-13 22:59 IST

ವಿಜಯನಗರ(ಹೊಸಪೇಟೆ):ಹೊಸಪೇಟೆ ನಗರದಲ್ಲಿ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ಘರ್ ಘರ್ ತಿರಂಗ್, ಹರ್‌ಘರ್ ತಿರಂಗ್’ ಅಭಿಯಾನಕ್ಕೆ ಹೊಸಪೇಟೆ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್ ಬೈಕ್ ರ‍್ಯಾಲಿಗೆ ಬುಧವಾರ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ದೇಶದಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವ ಆಶಯದಂತೆ ಪ್ರತಿ ಮನೆಗಳ ಮೇಲೆ ದೇಶದ ತಿರಂಗ ಧ್ವಜವನ್ನು ಹಾರಿಸುವ ಮೂಲಕ ಭಾವೈಕ್ಯತೆ ಮತ್ತು ದೇಶಭಕ್ತಿ ಮೆರೆಯಬೇಕು. ಈ ನಿಟ್ಟಿನಲ್ಲಿ ನಗರಸಭೆಯ ಎಲ್ಲಾ ಸದಸ್ಯರು ಮತ್ತು ಅಧಿಕಾರಿಗಳು ಬೈಕ್ ರ‍್ಯಾಲಿಯ ಮೂಲಕ ಮನೆ ಮನೆಗೂ ರಾಷ್ಟçಧ್ವಜ ಹಾರಿಸುವ ಜನಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸಲು ಮುಂದಾಗಿದ್ದೇವೆ ಎಂದರು.

ಬೈಕ್ ರ‍್ಯಾಲಿ ನಗರಸಭೆ ಆವರಣದಿಂದ ಆರಂಭವಾಗಿ ಮಾರ್ಕೆಟ್, ಮದಕರಿ ನಾಯಕ ವೃತ್ತ, ಗಾಳೆಮ್ಮ ಗುಡಿ, ವಾಲ್ಮೀಕಿ ವೃತ್ತ, ಮಾರ್ಕಂಡೇಶ್ವರ ದೇವಸ್ಥಾನ, ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆ, ವಿಜಯನಗರ ಕಾಲೇಜು, ಅಂಬೇಡ್ಕರ್ ವೃತ್ತ, ಡಾ.ಪುನೀತ್ ರಾಜಕುಮಾರ್ ವೃತ್ತ ಮೂಲಕ ಬಸ್ ಸ್ಟಾಂಡ್ ಮಾರ್ಗವಾಗಿ ಸಾಗಿತ್ತು. ರ‍್ಯಾಲಿಯಲ್ಲಿ ಭಾಗವಹಿಸಿದ್ದ ಸದಸ್ಯರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ವಂದೇ ಮಾತರಂ, ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ದೇಶಭಕ್ತಿ ಉತ್ಸಾಹವನ್ನು ಪ್ರದರ್ಶಿಸಿದರು.

ನಗರಸಭೆ ಉಪಾಧ್ಯಕ್ಷ ಜೆ.ಎಸ್.ರಮೇಶ್ ಗುಪ್ತ, ನಗರಸಭೆ ಆಯುಕ್ತ ಶಿವಕುಮಾರ, ಸೇರಿದಂತೆ ಸದಸ್ಯರು, ನಗರಸಭೆ ಸಿಬ್ಬಂದಿಗಳು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News