ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿ ಕಳಪೆ : ಎಚ್.ಜಿ.ವಿರುಪಾಕ್ಷ ಆರೋಪ
Update: 2025-11-29 22:51 IST
ವಿಜಯನಗರ: ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಂದ ಕಳಪೆ ಕಾಮಗಾರಿಗಳು ನಡೆದಿರುವ ಆರೋಪಗಳಿವೆ. ಹಲವೆಡೆ ರಸ್ತೆ, ತಡೆಗೋಡೆ ಮತ್ತು ಚರಂಡಿ ಕಾಮಗಾರಿಗಳು ಅವೈಜ್ಞಾನಿಕವಾಗಿ ಮತ್ತು ಕಳಪೆಯಾಗಿರುವ ಬಗ್ಗೆ ದೂರುಗಳು ಬರುತ್ತಿದೆ ಎಂದು ಎಚ್.ಜಿ.ವಿರುಪಾಕ್ಷ ಹೇಳಿದ್ದಾರೆ.
ವಿಜಯನಗರ ಕ್ಷೇತ್ರದ ಕಮಲಾಪುರ ಪಟ್ಟಣದಿಂದ ದೇವಲಾಪುರ ಗ್ರಾಮದವರೆಗೆ ಅಪೆಂಡಿಕ್ಸ್ ಇ ಕಾಮಗಾರಿ ಅಡಿಯಲ್ಲಿ ನಡೆಯುತ್ತಿರುವ 1.60 ಕಿಲೋಮೀಟರ್ ಉದ್ದ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಎಂದು ವಿಜಯನಗರ ಶಾಸಕ ಎಚ್. ಆರ್ ಗವಿಯಪ್ಪ ಅವರ ಪುತ್ರ ಎಚ್.ಜಿ.ವಿರುಪಾಕ್ಷ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಲೋಕಉಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರವಿ ನಾಯಕ್, ಯಾವುದೇ ರೀತಿಯ ಕಳಪೆ ಕಾಮಗಾರಿ ನಡೆದಿರುವುದಿಲ್ಲ. ನಮ್ಮ ಇಲಾಖೆಯಲ್ಲಿ ನಾವು ಪ್ರಾಮಾಣಿಕವಾಗಿ ರಸ್ತೆ ಮರು ಡಾಂಬರೀಕರಣ ಮಾಡಿದ್ದೇವೆ. ಶಾಸಕರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಹೇಳಿದ್ದಾರೆ.