ವಿಜಯನಗರ | ಬಾಲಕ ನಾಪತ್ತೆ : ಪ್ರಕರಣ ದಾಖಲು
Update: 2025-08-08 20:04 IST
ವಿಜಯನಗರ : ಹೊಸಪೇಟೆ ನಗರದ ಚಿತ್ತವಾಡ್ಗಿ ನಿವಾಸಿ ಬಾಲಕನೋರ್ವ ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಮಂಜುನಾಥ(16) ನಾಪತ್ತೆಯಾದ ಬಾಲಕ. ಜು.31ರಂದು ಮನೆಯಿಂದ ಹೋದ ಬಾಲಕ ಮತ್ತೆ ಮನೆಗೆ ವಾಪಾಸ್ಸಾಗಿಲ್ಲ ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕ 5.5 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು,ಗೋಧಿ ಮೈಬಣ್ಣವನ್ನು ಹೊಂದಿದ್ದು, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾನೆ. ನೀಲಿ ಬಣ್ಣದ ಹಾಫ್ ಟೀಶರ್ಟ್, ಹಳದಿ ಬಣ್ಣದ ಜರ್ಕಿನ್ ಧರಿಸಿರುತ್ತಾನೆ. ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ಚಿತ್ತವಾಡ್ಗಿ ಪೊಲೀಸ್ ಠಾಣೆ ಮೊಬೈಲ್ ಸಂಖ್ಯೆ 9480805733, 9480805757 ಅಥವಾ ಹೊಸಪೇಟೆ ಡಿಎಸ್‌ಪಿ ದೂರವಾಣಿ ಸಂಖ್ಯೆ 08394224204 ಅಥವಾ ವಿಜಯನಗರ ಎಸ್‌ಪಿ ಮೊಬೈಲ್ ಸಂಖ್ಯೆ 9480805700ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.