×
Ad

ವಿಜಯನಗರ | ಹೊಸಕೋಟೆ ಗ್ರಾಮ ಪಂಚಾಯತ್‌ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ

Update: 2026-02-03 21:20 IST

ವಿಜಯನಗರ (ಹರಪನಹಳ್ಳಿ): ತಾಲೂಕಿನ ಹೊಸಕೋಟೆ ಗ್ರಾಮ ಪಂಚಾಯಿತಿಯಲ್ಲಿ ಐದು ವರ್ಷಗಳ ಸೇವಾ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗ್ರಾಮ ಪಂಚಾಯತ್ ಸದಸ್ಯರನ್ನು ಪಂಚಾಯಿತಿ ಸಿಬ್ಬಂದಿ ಹಾಗೂ ಪಿಡಿಒ ಹೇಮಂತ್ ಕುಮಾರ್ ಅವರು ಸನ್ಮಾನಿಸಿ ಗೌರವಯುತವಾಗಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಮಂತ್ ಕುಮಾರ್, ಪಂಚಾಯಿತಿ ದೇಹವಾಗಿದ್ದರೆ, ಸದಸ್ಯರು ಅದರ ಅಂಗಾಂಗಗಳಂತೆ ಕಾರ್ಯನಿರ್ವಹಿಸಬೇಕು. ಸದಸ್ಯರು ಮತ್ತು ಸಿಬ್ಬಂದಿ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಪಂಚಾಯಿತಿಯ ಸಮಗ್ರ ಅಭಿವೃದ್ಧಿ ಸಾಧ್ಯ. ನನ್ನ ಸೇವಾ ಅವಧಿಯಲ್ಲಿ ಇಂತಹ ಸಹಾನುಭೂತಿ ಮತ್ತು ಸಹಕಾರ ಮನೋಭಾವದ ಸದಸ್ಯರೊಂದಿಗೆ ಕಾರ್ಯನಿರ್ವಹಿಸಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಸಿದ್ದಪ್ಪ, ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಕೆ.ಪಿ. ರಂಜಿತಾ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಡಿ. ನಾಗಪ್ಪ, ಉಪಾಧ್ಯಕ್ಷೆ ಕವಿತಮ್ಮ ವಿರೇಶ್, ಸದಸ್ಯರಾದ ಬಿ. ರೇಣುಕಮ್ಮ, ಕಬ್ಬಳ್ಳಿ ಶ್ರೀನಿವಾಸ್, ಟಿ. ಪಾಂಡುರಂಗಪ್ಪ, ಜಿ. ಅಮರೇಶ್, ಬಿ. ಮಂಜಮ್ಮ ಆನಂದಪ್ಪ, ಜಯಮ್ಮ ಕೃಷ್ಣಪ್ಪ, ವಡ್ಡಿನಹಳ್ಳಿ ಕೆಂಚಪ್ಪ, ಆರ್. ಆಶಾ, ಗೌರಮ್ಮ ಜಗದೀಶ್, ಬಸಮ್ಮ ಲೋಕಪ್ಪ, ಕೆ.ಎನ್. ಸಿದ್ದೇಶ್, ಹೆಚ್. ಕರಿಬಸಪ್ಪ, ಕಾರ್ಯದರ್ಶಿ ರೇವಣಸಿದ್ಧಚಾರಿ, ಬಿಲ್ ಕಲೆಕ್ಟರ್ ಕರಿಯಪ್ಪ, ಡೇಟಾ ಎಂಟ್ರಿ ಆಪರೇಟರ್ ಚೆನ್ನಬಸಪ್ಪ, ದೇವೇಂದ್ರಪ್ಪ, ಅಂಜಿನಪ್ಪ, ಚೆನ್ನವೀರಪ್ಪ, ಕೆಂಚಪ್ಪ, ರುದ್ರೇಶ್, ಗ್ರಂಥಪಾಲಕಿ ಗಂಗಮ್ಮ, ಪುಟ್ಟಮ್ಮ, ಮುಖಂಡರಾದ ಆನಂದಪ್ಪ, ಹನುಮಂತಪ್ಪ, ರಾಮಚಂದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News