ವಿಜಯಪುರದಲ್ಲಿ ಕೊಳವೆಬಾವಿಗೆ ಬಿದ್ದ ಮಗು: ಭರದಿಂದ ಸಾಗಿದೆ ರಕ್ಷಣೆ ಕಾರ್ಯ

Update: 2024-04-04 06:13 GMT

ವಿಜಯಪುರ, ಎ.4: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಮಗು ಸಾತ್ವಿಕ್ ರಕ್ಷಣೆ ಕಾರ್ಯಾಚರಣೆ ಭರದಿಂದ ಸಾಗಿದೆ. ಕಾರ್ಯಾಚರಣೆ ಬಹುತೇಕ ಅಂತಿಮ ಘಟ್ಟ ತಲುಪಿದೆ ಎಂದು ವಿಜಯಪುರ ಜಿಲ್ಲಾಡಳಿತ ತಿಳಿಸಿದೆ.

SDRF, NDRF ತಂಡ ಕಳೆದ 14 ಗಂಟೆಗಳಿಂದ ಅಹೋರಾತ್ರಿ ಮಗುವಿನ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಮಗು ಕೊಳವೆಬಾವಿಗೆ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಬುಧವಾರ ಸಂಜೆ 6 ಗಂಟೆಗೆ ರಕ್ಷಣೆ ಕಾರ್ಯಾಚರಣೆ ಆರಂಭಿಸಲಾಗಿದೆ. 20 ಅಡಿಗಳಷ್ಟು ಡ್ರಿಲ್ಲಿಂಗ್ ಮಾಡಿದೆ. ಕಾರ್ಯಾಚರಣೆಗೆ ಗಟ್ಟಿಯಾದ ಕಲ್ಲು ಬಂಡೆಗಳ ಅಡ್ಡಿಯಾಗಿದೆ.

ಅಗ್ನಿಶಾಮಕ ದಳ, ಬೆಳಗಾವಿ, ಕಲಬುರ್ಗಿಯಿಂದ ಆಗಮಿಸಿರುವ ಎರಡು SDRF ತಂಡ ಕೊಳವೆ ಬಾವಿ ಕೊರೆಯುವ ನುರಿತರ ತಂಡಗಳಿಂದ ನಿರಂತರ ಕಾರ್ಯಾಚರಣೆ ಮುಂದುವರಿದಿದೆ. ಕಾರ್ಯಾಚರಣೆಗೆ ಎರಡು ಹಿಟಾಚಿ, ಬ್ರೇಕರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಮಗುವನ್ನು ಹೊರ ತೆಗೆದ ತಕ್ಷಣ ಚಿಕಿತ್ಸೆಗಾಗಿ ಸ್ಥಳದಲ್ಲಿ ವೈದ್ಯರ ತಂಡ ಸನ್ನದ್ಧವಾಗಿ ನಿಂತಿದೆ. ವೆಂಟಿಲೇಟರ್ ಯುಕ್ತ ಆ್ಯಂಬುಲೆನ್ಸ್ ಕೂಡಾ ಸ್ಥಳದಲ್ಲಿದೆ.

ಈ ನಡುವೆ ಕಾರ್ಯಾಚರಣೆ ನೋಡಲು ಕಿಕ್ಕಿರಿದು ಸೇರಿದ ಜನರು ಕೂಡಾ ಸ್ಥಳದಲ್ಲಿ ಜಮಾಯಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News