×
Ad

ವಿಜಯಪುರ: ಅಪಘಾತವಾದ ಸ್ಥಿತಿಯಲ್ಲಿ ಗ್ರಾಪಂ ಸದಸ್ಯನ ಮೃತದೇಹ ಪತ್ತೆ!

Update: 2025-10-29 17:36 IST

ವಿಜಯಪುರ: ರಸ್ತೆ ಬಳಿ  ಅಪಘಾತವಾದ ಸ್ಥಿತಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನೋರ್ವನ ಮೃತದೇಹ ಜಿಲ್ಲೆಯ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ಪತ್ತೆಯಾಗಿದೆ.

ತಾರಾಪೂರ ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಬಿರಾದಾರ (36) ಮೃತಪಟ್ಟವರು.

ಸಂತೋಷ ಬಿರಾದಾರ ಬೈಕ್ ಮೇಲಿಂದ ಬಿದ್ದ ಸ್ಥಿತಿಯಲ್ಲಿದ್ದು, ತಲೆಗೆ ಏಟು ಬಿದ್ದು ರಕ್ತಸ್ರಾವವಾಗಿದೆ. ಇದು ಅಪಘಾತವೋ ಅಥವಾ ಕೊಲೆಯೋ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದ್ದು, ಸ್ಥಳಕ್ಕೆ ಆಲಮೇಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News