ವಿಜಯಪುರ: ನೀರಿನ ಹೊಂಡಕ್ಕೆ ಬಿದ್ದು ಬಾಲಕ ಮೃತ್ಯು
Update: 2025-11-11 21:03 IST
ವಿಜಯಪುರ: ನಗರದ ಐತಿಹಾಸಿಕ ಆಸಾರ್ ಮಹಾಲ್ ಬಳಿ ಇರುವ ನೀರಿನ ಹೊಂಡದಲ್ಲಿ ಆಟ ಆಡುತ್ತಾ ಹೋಗಿ ಬಾಲಕನೋರ್ವ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಬಾಲಕನನ್ನು ಲೊಹಾರಗಲ್ಲಿ ನಿವಾಸಿ ಪ್ರೀತಂ ಪವಾರ (10) ಎಂದು ಗುರುತಿಸಲಾಗಿದೆ.
ಇಂದು ಸಂಜೆ ಹೊತ್ತಿಗೆ ನಗರದ ಆಸರ ಮಹಾಲ್ ಮುಂದೆ ಇರುವ ಹೊಂಡದ ಬಳಿ ಮಗು ಆಟವಾಡುತ್ತಿರುವ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದಿದ್ದಾನೆ. ಅಲ್ಲಿ ಇದ್ದ ಸ್ಥಳೀಯ ಯುವಕರು ಸೇರಿ ಬಾಲಕನ್ನು ನೀರಿನಿಂದ ಹೊರಗೆ ತೆಗೆಯುವ ಪ್ರಯತ್ನ ಮಾಡಿ ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಆಸಾರ್ ಮಹಲ್ ಹೊಂಡಕ್ಕೆ ಸುತ್ತಲೂ ತಂತಿ ಬೇಲಿ ಹಾಕುವ ಪ್ರಯತ್ನವನ್ನೂ ಮಾಡಿಲ್ಲ, ಸ್ಥಳೀಯರು ಹಲವಾರು ಬಾರಿ ಮನವಿ ಮಾಡಿದ್ದರೂ ನಿರ್ಲಕ್ಚ್ಯ ತೋರಲಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದರು.
ಗೋಳಗುಮ್ಮಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.