ಉತ್ತರಾಧಿಕಾರಿ ಕುರಿತ ಯತಿಂದ್ರ ಹೇಳಿಕೆ: ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ...
Update: 2025-10-25 20:12 IST
ವಿಜಯಪುರ: ಸಚಿವ ಸತೀಶ್ ಜಾರಕಿಹೊಳಿ ಹಿಂದುಳಿದ ನಾಯಕ ಸಿದ್ದರಾಮಯ್ಯ ಅವರ ನಂಬಿಕೆ, ಸಿದ್ಧಾಂತಗಳ ಮೇಲೆ ವಿಶ್ವಾಸ ಇಟ್ಟವರು ಎಂದು ಯತೀಂದ್ರ ಹೇಳಿದ್ದಾರೆ. ಆದರೆ ಅವರೇ ಸಿಎಂ ಆಗುತ್ತಾರೆ ಎಂದು ಹೇಳಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಎಂದು ಬೃಹತ್ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ ಎಂಬ ಅರ್ಥದಲ್ಲಿ ಮಾತನಾಡಿರುವ ಸಿಎಂ ಪುತ್ರ ಹೇಳಿಕೆ ವಿಚಾರದ ಕುರಿತು ಈಗಾಗಲೇ ನಾನು ಸ್ಪಷ್ಟನೆ ಕೊಟ್ಟಿದ್ದೇನೆ. ಸಿಎಂ ಹಾಗೂ ಯತೀಂದ್ರ ಅವರೂ ಸ್ಪಷ್ಟನೆ ನೀಡಿದ್ದಾರೆ.
ವಿಜಯಪುರಕ್ಕೆ ಬಂದರೆ ಯತಿಂದ್ರಾ ಅವರು ನನ್ನ ಕುರಿತು ಮಾತನಾಡುತ್ತಾರೆ. ಹೀಗೆಲ್ಲ ಮಾತಾಡುವುದು ಸ್ವಾಭಾವಿಕ ಎಂದು ಅವರು ಹೇಳಿದರು.