×
Ad

ವಿಜಯಪುರ | ಬೈಕ್‌ನಲ್ಲಿ ಕುಳಿತಿದ್ದ ವಕೀಲನಿಗೆ ಢಿಕ್ಕಿ ಹೊಡೆದು ಎಳೆದೊಯ್ದ ಕಾರು!

Update: 2024-08-08 23:08 IST

ವಕೀಲ ರವಿ ಮೇಲಿನಮನಿ

ವಿಜಯಪುರ : ಬೈಕ್ ಮೇಲೆ ಕುಳಿತಿದ್ದ ವಕೀಲರೊಬ್ಬರಿಗೆ ಢಿಕ್ಕಿ ಹೊಡೆದ ಕಾರೊಂದು, ಬೋನಟ್‌ ನಲ್ಲಿಯೇ ಸಿಲುಕಿದ್ದ ಅವರನ್ನು ಕಿಲೋ ಮೀಟರ್‌ಗಟ್ಟಲೇ ಎಳೆದೊಯ್ದ ಘಟನೆ ವಿಜಯಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಗುರುವಾರ ಸಂಜೆ ವರದಿಯಾಗಿದೆ.

ಘಟನೆಯಲ್ಲಿ ಇಂಡಿ ತಾಲೂಕಿನ ಅಗರಖೇಡ ಗ್ರಾಮದ ವಕೀಲ ರವಿ ಮೇಲಿನಮನಿ (24) ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಸವನಗರದಲ್ಲಿ ಬೈಕ್ ಮೇಲೆ ಕುಳಿತಿದ್ದಾಗ ವೇಗವಾಗಿ ಬಂದ ಇನ್ನೋವಾ ಕಾರು ಬಲವಾಗಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಕಾರಿನ ಮುಂಭಾಗದ ಬೋನಟ್‌ನಲ್ಲಿ ದೇಹ ಸಿಕ್ಕಿದರೂ ಕಾರು ನಿಲ್ಲಿಸದೇ ಬಿಎಲ್‌ಡಿಇ ಆಯುಷ್ ಆಸ್ಪತ್ರೆವರೆಗೆ ಎಳೆದುಕೊಂಡು ಹೋಗಿರುವ ಕಾರು ಚಾಲಕ, ಅವರ ಮೃತದೇಹ ಬಿಟ್ಟು ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಬೈಕ್ ಸವಾರ, ವಕೀಲ ಕಾರಿನ ಮುಂಭಾಗದಲ್ಲಿ ಸಿಲುಕಿದ್ದನ್ನು ಗಮನಿಸಿದ ಸಾರ್ವಜನಿಕರು ಹಾಗೂ ಇತರ ವಾಹನ ಸವಾರರು ಕಿರುಚಾಡಿ ನಿಲ್ಲಿಸುವಂತೆ ಹೇಳಿದರೂ, ಕಾರು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಇದೊಂದು ಉದ್ದೇಶಪೂರಿತ ಕೃತ್ಯ ಎಂದು ಶಂಕಿಸಲಾಗಿದೆ. ಟಿಂಟೆಡ್ ಗ್ಲಾಸ್ ಇರುವ, ನಂಬರ್ ಪ್ಲೇಟ್ ಇಲ್ಲದ ಕಾರು ಬಳಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸ್ಥಳೀಯರು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News