×
Ad

ವಿಜಯಪುರ | ಉಪಚುನಾವಣೆಯಲ್ಲಿ ಸೋಲು : ಟಿವಿ ಎಸೆದು ಆಕ್ರೋಶ ಹೊರಹಾಕಿದ ಬಿಜೆಪಿ ಕಾರ್ಯಕರ್ತ

Update: 2024-11-23 21:53 IST

ವಿಜಯಪುರ : ರಾಜ್ಯದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಹೀನಾಯ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ಹಿರಿಯ ಕಾರ್ಯಕರ್ತನೋರ್ವ ಟಿವಿ ಹೊಡೆದು ಆಕ್ರೋಶ ಹೊರಹಾಕಿದ್ದಾರೆ.

ವಿಜಯಪುರ ಜಿಲ್ಲೆ ಕೋಲ್ಹಾರ ಪಟ್ಟಣದ ಬಿಜೆಪಿ ಕಾರ್ಯಕರ್ತ ವೀರಭದ್ರಪ್ಪ ಅವರು ಉಪಚುನಾವಣೆ ಸೋಲಿನಿಂದಾಗಿ ಮನೆಯಲ್ಲಿದ್ದ ಟಿವಿಯನ್ನು ಹೊರಗೆ ತಂದು ರಸ್ತೆಗೆ ಎಸೆದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿಲ್ಲದ ಕಾರಣ ಕಾರ್ಯಕರ್ತರು ಬಲಿಪಶುವಾಗುತ್ತಿದ್ದಾರೆ. ಇವರಲ್ಲಿಯೇ ಮೂರ್ನಾಲ್ಕು ಭಾಗವಾದರೆ ಹೇಗೆ ಎಂದು ಬಿಜೆಪಿ ನಾಯಕರನ್ನು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News