ವಿಜಯಪುರ | ಮತ್ತೆ ಭೂಕಂಪನದ ಅನುಭವ
Update: 2025-10-29 15:27 IST
ಸಾಂದರ್ಭಿಕ ಚಿತ್ರ (PTI)
ವಿಜಯಪುರ: ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಮತ್ತೊಮ್ಮೆ ಭೂ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.0 ತೀವ್ರತೆ ದಾಖಲಾಗಿದೆ.
ಮಂಗಳವಾರ ರಾತ್ರಿ 11:41ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದೆ. ಅದಾದ ಬಳಿಕ ಬುಧವಾರ ಮುಂಜಾನೆ 5:30ರ ಸುಮಾರಿಗೆ ಮತ್ತೊಮ್ಮೆ ಭೂಮಿ ಕಂಪಿಸಿದೆ.
ಜಿಲ್ಲೆಯಲ್ಲಿ ಸರಣಿ ಭೂಕಂಪನ ಸಂಭವಿಸುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ 11 ಬಾರಿ ಭೂಮಿ ಕಂಪಿಸಿದ್ದು, ಇದರಿಂದ ಜನರಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ.