ವಿಜಯಪುರ | ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದಾತನ ಕೊಲೆ : 7 ಮಂದಿ ಆರೋಪಿಗಳ ಬಂಧನ
ವಿಜಯಪುರ: ಸರಕಾರಿ ಕೆಲಸ ಕೊಡಿಸುವುದಾಗಿ ವಂಚಿಸಿದ ವ್ಯಕ್ತಿಯಿಂದ ಮರಳಿ ಹಣ ಕೇಳುವ ವಿಚಾರದಲ್ಲಿ ಗಲಾಟೆ ನಡೆದು ವಂಚಿಸಿದ ವ್ಯಕ್ತಿಯ ಹತ್ಯೆ ನಡೆದಿರುವ ಘಟನೆ ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮನಗೂಳಿ ಪಟ್ಟಣದ ರಾಮಗೊಂಡಪ್ಪ ಲೇಸಪ್ಪಗೋಳ (58) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ತಾಳಿಕೋಟಿ ತಾಲೂಕಿನ ದಡೆಕನೂರ ಚಂದ್ರಶೇಖರ ಹಿರೇಗೌಡ, ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರದ ನೀಲಕಂಠರಾಯಗೌಡ ಟಕ್ಕಳಕಿ, ಮುದ್ದೇಬಿಹಾಳ ತಾಲ್ಲೂಕಿನ ಗುಡದಿನ್ನಿಯ ಅಮರೇಶ್ವರ ನಾಡಗೌಡ, ವಿಜಯಪುರದ ಸಾಯಿಪಾರ್ಕ ಮಹಿಬೂಬ ನಗರದ ನಿರ್ಮಲಾ ಹೊಸಮನಿ, ವಿಜಯಪುರದ ಸಾಯಿಪಾರ್ಕ್ ಮಹಿಬೂಬ ನಗರದ ಪ್ರಮೀಳಾ ಚಲವಾದಿ, ವಿಜಯಪುರದ ದರ್ಗಾಜೈಲದ ಮಲ್ಲಮ್ಮ ಹಾದಿಮಿನಿ ಹಾಗೂ ಮುತ್ತಪ್ಪ ಭೋವಿ ಎಂದು ಗುರುತಿಸಲಾಗಿದೆ.
ರಾಮಗೊಂಡಪ್ಪ 4 ವರ್ಷಗಳ ಹಿಂದೆ ಸರಕಾರಿ ಕೆಲಸ ಕೊಡಿಸುವುದಾಗಿ ಚಂದ್ರಶೇಖರ ಹಿರೇಗೌಡ, ನೀಲಕಂಠರಾಯಗೌಡ ಟಕ್ಕಳಕಿ, ಅಮರೇಶ್ವರ ನಾಡಗೌಡ ಅವರಿಂದ ಹಣ ಪಡೆದಿದ್ದರು. 4 ವರ್ಷ ಕಳೆದರೂ ಕೆಲಸ ಕೊಡಿಸದ ಹಿನ್ನೆಲೆಯಲ್ಲಿ ಮರಳಿ ಹಣ ಕೇಳುವಾಗ ನಡೆದ ಗಲಾಟೆಯಲ್ಲಿ ವಂಚಿಸಿದ ವ್ಯಕ್ತಿಯ ಹತ್ಯೆ ನಡೆದಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮನಗೂಳಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದೆ.