×
Ad

ಬಣ್ಣ ಬದಲಿಸುವ ಮೂಲಕ ಹಿಮದಲ್ಲಿ ಅಡಗುವ ಮೂರು ಪ್ರಾಣಿಗಳ ವಿವರ ಇಲ್ಲಿದೆ…

Update: 2025-12-22 16:57 IST

Photo Credit : Wikipedia

ಆರ್ಕಿಟಿಕ್ ಪ್ರಾಣಿಗಳಿಗೆ ಇತರರ ಕಣ್ಣಿಗೆ ಬೀಳದಂತೆ ಮರೆಯಾಗಿರುವ ಅಗತ್ಯವಿರುತ್ತದೆ. ಬೇಟೆಯಿಂದ ತಪ್ಪಿಸಿಕೊಳ್ಳಲು ಕಣ್ಣಿಗೆ ಮಣ್ಣೆರಚಿ ಬದುಕುಳಿಯಬೇಕಾಗುತ್ತದೆ. ಹಿಮ ಪ್ರದೇಶದಲ್ಲಿ ಹೀಗೆ ತುಪ್ಪಳದ ಬಣ್ಣ ಬದಲಿಸುವ ಮೂರು ಪ್ರಾಣಿಗಳ ವಿವರ ಇಲ್ಲಿದೆ

ಹಿಮ ಮತ್ತು ಸಂಪೂರ್ಣ ಬಿಳಿಯಾಗಿರುವ ಪರಿಸರದಲ್ಲಿ ಹಿಮದಲ್ಲಿ ಕಣ್ಮರೆಯಾಗಿ ಬದುಕಿದಲ್ಲಿ ಮಾತ್ರ ಅಸ್ತಿತ್ವ ಉಳಿಸಿಕೊಳ್ಳಬಹುದು. ಆರ್ಕಿಟಿಕ್ ಪರಿಸರ ಜೀವಿಗಳಿಗೆ ಬಹು ಮಾರಕ. ಅಲ್ಲಿ ನೆಲೆಸಿರುವ ಪ್ರಾಣಿಗಳು ನಡುಗುವ ಚಳಿಯನ್ನು ಎದುರಿಸಬೇಕು. ಧೀರ್ಘ ರಾತ್ರಿಗಳು, ನಿರಂತರವಾಗಿ ಬೀಳುವ ಹಿಮ ಮತ್ತು ಮಂಜು ಎದುರಿಸಬೇಕು. ಹೀಗಾಗಿ ಆರ್ಕಿಟಿಕ್ ಪ್ರಾಣಿಗಳಿಗೆ ಇತರರ ಕಣ್ಣಿಗೆ ಬೀಳದಂತೆ ಮರೆಯಾಗಿರುವ ಅಗತ್ಯವಿರುತ್ತದೆ. ಬೇಟೆಯಿಂದ ತಪ್ಪಿಸಿಕೊಳ್ಳಲು ಕಣ್ಣಿಗೆ ಮಣ್ಣೆರಚಿ ಬದುಕುಳಿಯಬೇಕಾಗುತ್ತದೆ. ಹಿಮ ಪ್ರದೇಶದಲ್ಲಿ ಹೀಗೆ ಮರೆಯಾಗಿ ಬದುಕುವ ಮೂರು ಪ್ರಾಣಿಗಳ ವಿವರ ಇಲ್ಲಿದೆ.

 Photo Credit : Wikipedia

 

ಆರ್ಕಿಟಿಕ್ ನರಿಗಳು

ಆರ್ಕಿಟಿಕ್ ನರಿಗಳು (ವಲ್ಪೆಸ್ ಲ್ಯಾಗೋಪಸ್) ಹೀಗೆ ಹಿಮದಲ್ಲಿ ಮರೆಯಾಗಿ ಬದುಕುವ ಪ್ರಾಣಿಗಳಿಗೆ ಉತ್ತಮ ಉದಾಹರಣೆ. ಚಳಿಗಾಲದಲ್ಲಿ ಅವುಗಳ ತುಪ್ಪಳ ಬಿಳಿಯಾಗಿ ಮಾರ್ಪಡುತ್ತವೆ. ಹೀಗಾಗಿ ಆರ್ಕಿಟಿಕ್ನ ಹಿಮಪ್ರದೇಶದಲ್ಲಿ ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿ ಬದುಕಲು ಸಾಧ್ಯವಾಗಿದೆ,

ನರಿಯ ತುಪ್ಪಳ ಋತುಗಳಿಗೆ ತಕ್ಕಂತೆ ಬದಲಾಗುತ್ತದೆ. ಬೇಸಗೆಯಲ್ಲಿ ಚರ್ಮ ಕಂದು ಅಥವಾ ಬೂದು ಬಣ್ಣದಲ್ಲಿರುತ್ತದೆ. ಹೀಗಾಗಿ ನೆಲದ ಬಣ್ಣಕ್ಕೆ ತಕ್ಕಂತೆ ಇರುತ್ತದೆ. ವರ್ಷವಿಡೀ ಅದು ಬಣ್ಣ ಬದಲಾಯಿಸುತ್ತಿರುತ್ತದೆ. ಅದರ ದಪ್ಪನೆಯ ತುಪ್ಪಳ ಚಳಿಗಾಲದಲ್ಲಿ ಉಷ್ಣಾಂಶ -50 ಡಿಗ್ರಿಗೆ ಹೋಗುವಾಗ ಬೆಚ್ಚಗೆ ಇರಲು ನೆರವಾಗುತ್ತದೆ.

 Photo Credit :  Wikipedia

ಹಿಮ ಗೂಬೆ

ಹಿಮ ಗೂಬೆ (ಬ್ಯೂಬೊ ಸ್ಕ್ಯಾಂಡಿಯಕಸ್) ಹಿಮ ಪ್ರದೇಶಗಳಲ್ಲಿ ಬದುಕಲು ಸೂಕ್ತವಾಗಿರುವ ಮತ್ತೊಂದು ಪಕ್ಷಿ. ವಯಸ್ಕ ಗಂಡು ಗೂಬೆಗಳು ಸಂಪೂರ್ಣ ಬಿಳಿ ಬಣ್ಣದಲ್ಲಿರುತ್ತವೆ. ಹೀಗಾಗಿ ಅವು ಹಿಮ ಮತ್ತು ಮಂಜಿನ ಜೊತೆಗೆ ಬೆರೆತು ಬದುಕಬಹುದು. ಹೆಣ್ಣು ಗೂಬೆಗಳಿಗೆ ಕರಿ ಚುಕ್ಕೆಗಳಿರುತ್ತವೆ. ಅವು ಹಿಮ ಮತ್ತು ಕಲ್ಲಿನ ನಡುವೆ ಅಡಗಿ ಕೂರಲು ಸುಲಭವಾಗುತ್ತದೆ.

ಬೇಟೆಯಾಡುವಾಗ ಹಿಮದ ನಡುವೆ ಅಡಗಿ ಕೂರಲು ಅವುಗಳಿಗೆ ಬಿಳಿ ಬಣ್ಣ ನೆರವಾಗುತ್ತದೆ. ಲೆಮಿಂಗ್ಗಳಂತಹ (ಇಲಿ ಜಾತಿಯ) ಪ್ರಾಣಿಗಳ ಕಣ್ಣಿಗೆ ಕಾಣದಂತೆ ಅಡಗಿ ಬೇಟೆಯಾಡಲು ಸಹಾಯವಾಗಿದೆ. ಅಲ್ಲದೆ ಇತರ ಬೇಟೆಗಾರ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಬಿಳಿ ಬಣ್ಣ ನೆರವಾಗಿದೆ.

 Photo Credit : Wikipedia

 

ಆರ್ಕಿಟಿಕ್ ಮೊಲ

ಆರ್ಕಿಟಿಕ್ ಮೊಲ (ಲೆಪಸ್ ಆರ್ಕ್ಟಿಕಸ್) ಬಿಳಿ ಬಣ್ಣದ ತುಪ್ಪಳದಿಂದಾಗಿ ಹಿಮದ ನಡುವೆ ಅಡಗಲು ನೆರವಾಗಿದೆ. ಚಳಿಗಾಲದಲ್ಲಿ ಈ ಮೊಲಗಳ ಚರ್ಮ ಬಿಳಿ ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಹಿಮದ ಜೊತೆಗೆ ಬೆರೆತು ಬೇಟೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಬೇಸಗೆ ಕಾಲದಲ್ಲಿ ಇವುಗಳ ಬಣ್ಣ ಕಂದು ಅಥವಾ ಬೂದು ಇರುವ ಕಾರಣ ನೆಲದ ಬಣ್ಣದ ಜೊತೆಗೆ ಹೊಂದಿಕೊಳ್ಳುತ್ತದೆ. ಬೆದರಿಕೆ ಎದುರಾದಾಗ ಅವು ಅತಿ ವೇಗದಲ್ಲಿ ಹಿಮದ ಮೇಲೆ ಓಡುತ್ತವೆ.

ಆರ್ಕಿಟಿಕ್ನಲ್ಲಿ ಬಣ್ಣ ಬದಲಿಸುವ ಅಗತ್ಯವೇನಿದೆ?

ಸಂಶೋಧಕರ ಪ್ರಕಾರ ಆರ್ಕಿಟಿಕ್ ಪ್ರದೇಶದಲ್ಲಿ ಮರಗಳು ಮತ್ತು ಸಸ್ಯಗಳು ಕಡಿಮೆ ಇರುತ್ತವೆ. ಹೀಗಾಗಿ ಹಿಮದಲ್ಲಿ ಬೇಗನೇ ಕಣ್ಣಿಗೆ ಬಿದ್ದುಬಿಡುತ್ತವೆ. ಬಣ್ಣ ಬದಲಾಗುವುದರಿಂದ ಬೇಟೆಯಿಂದ ಬದುಕುಳಿಯಲು ನೆರವಾಗುತ್ತದೆ. ಆದರೆ ವಾತಾವರಣ ವೈಪರೀತ್ಯದಿಂದ ಈ ಪ್ರಬೇಧಗಳಿಗೂ ಸಮಸ್ಯೆ ಒಡ್ಡಿದೆ. ಚಳಿಗಾಲ ಕಡಿಮೆ ಇರುವುದು ಮತ್ತು ಹಿಮ ಮಳೆ ಕಡಿಮೆ ಇರುವ ಕಾರಣದಿಂದ ಚಳಿಗಾಲದ ಬಿಳಿ ಬಣ್ಣದಿಂದ ಈ ಪ್ರಾಣಿಗಳು ಬೇಗನೇ ಬೇಟೆಯ ಕಣ್ಣಿಗೆ ಬೀಳುವ ಅಪಾಯ ಹೆಚ್ಚಿದೆ.

ಕೃಪೆ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News