ಅನ್ನಭಾಗ್ಯ ಯೋಜನೆ ಲೆಕ್ಕಪರಿಶೋಧನೆ: ದತ್ತಾಂಶಗಳನ್ನೇ ಒದಗಿಸದ ಸರಕಾರ
ಬೆಂಗಳೂರು : ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಆದ್ಯತಾ ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳ ಅರ್ಹತೆ ಪರಿಶೀಲನೆ, ಅನರ್ಹ ಕುಟುಂಬಗಳಿಗೆ ಸೌಲಭ್ಯಗಳನ್ನು ವಿಸ್ತರಿಸಿರುವ ಸಾಧ್ಯತೆಯಿರುವ ಪ್ರಕರಣಗಳನ್ನು ಗುರುತಿಸಲು ಕುಟುಂಬ ಮತ್ತು ಫ್ರೂಟ್ಸ್ ದತ್ತಾಂಶಗಳನ್ನು ಸರಕಾರವು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಿಗೇ ದತ್ತಾಂಶಗಳನ್ನೇ ಒದಗಿಸಿಲ್ಲ.
ಅನ್ನಭಾಗ್ಯ ಯೋಜನೆ ಕುರಿತು ಸಿಎಜಿಯು ಆಹಾರ ನಾಗರಿಕ ಸರಬರಾಜು ಇಲಾಖೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದೆ. ಈ ಪತ್ರದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.
ಅಗತ್ಯವಿದ್ದ ದತ್ತಾಂಶವನ್ನು ಲೆಕ್ಕಪರಿಶೋಧನೆಗಾಗಿ ಒದಗಿಸಲಾಗಿಲ್ಲ. ಇದರಿಂದಾಗಿ ಕೈಗೊಳ್ಳಬಹುದಾಗಿದ್ದ ದತ್ತಾಂಶ ವಿಶ್ಲೇಷಣೆ ಮತ್ತು ಪರಿಶೀಲನೆಯ ವ್ಯಾಪ್ತಿಯೂ ಸಹ ಸೀಮಿತಗೊಂಡಿದೆ.
1.2 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿದ್ದ 8,281 ಫಲಾನುಭವಿಗಳು ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಇದಲ್ಲದೆ ದತ್ತಾಂಶದ ಪ್ರಕಾರ, ವಾರ್ಷಿಕ ಆದಾಯ ರೂ. 1.2 ಲಕ್ಷಕ್ಕಿಂತ ಹೆಚ್ಚಿರುವ 5,13,211 ಕುಟುಂಬಗಳನ್ನು ಬಿಪಿಎಲ್ ವರ್ಗದಲ್ಲಿ ಸೇರಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.
ವಾರ್ಷಿಕ ಆದಾಯ 1.2 ಲಕ್ಷ ರೂ.ಗಿಂತ ಹೆಚ್ಚಿರುವ ಕುಟುಂಬಗಳನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರ್ಪಡೆ ಮಾಡಿರುವುದು 8,281 ಫಲಾನುಭವಿಗಳು 1.2 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿದ್ದರೂ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವುದು ಕಂಡುಬಂದಿದೆ. ಇದಲ್ಲದೆ, Rightful Targeting ದತ್ತಾಂಶದ ಪ್ರಕಾರ, ವಾರ್ಷಿಕ ಆದಾಯ 1.2 ಲಕ್ಷ ರೂ.ಗಿಂತ
ಹೆಚ್ಚಿರುವ 5,13,211 ಕುಟುಂಬಗಳನ್ನು ಬಿಪಿಎಲ್ ವರ್ಗದಲ್ಲಿ ಸೇರಿಸಿರುವುದನ್ನು ಸಿಎಜಿಯು ಪ್ರಾಥಮಿಕ ಪರಿಶೀಲನೆ ವೇಳೆ ಬಹಿರಂಗಗೊಳಿಸಿದೆ.
ಒಂದೇ ಆಧಾರ್ ಸಂಖ್ಯೆಯನ್ನು ಹಲವು ಸಕ್ರಿಯ ಪಡಿತರ ಚೀಟಿ ಸಂಖ್ಯೆಗಳೊಂದಿಗೆ ಜೋಡಿಸಿರುವುದು ಮತ್ತು ಒಂದಕ್ಕಿಂತ ಹೆಚ್ಚು ಸಕ್ರಿಯ ಪಡಿತರ ಚೀಟಿ ಸಂಖ್ಯೆಗಳೊಂದಿಗೆ 16,304 ಜೋಡಿಸಲಾಗಿದೆ. ಆಧಾರ್‌ಅನ್ನು ವೈಯಕ್ತಿಕ ಫಲಾನುಭವಿಗಳಿಗೆ ವಿಶಿಷ್ಟ ಗುರುತಿನ ಸಂಖ್ಯೆಯಾಗಿ ಬಳಸುವ ಉದ್ದೇಶವಿದೆ. ಅಲ್ಲದೇ ಒಂದೇ ಆಧಾರ್ ಅನ್ನು ಹಲವು ಸಕ್ರಿಯ ಪಡಿತರ ಚೀಟಿಗಳಿಗೆ ಜೋಡಿಸಿರುವುದು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ದತ್ತಸಂಚಯದಲ್ಲಿ ಫಲಾನುಭವಿಗಳ ಸಂಭಾವ್ಯ ದ್ವಂದ್ವ ನೋಂದಣಿಗೆ ಕಾರಣವಾಗಿರುವುದು ಸಹ ಸಿಎಜಿ ಆಕ್ಷೇಪಣೆ ಪತ್ರದಿಂದ ತಿಳಿದು ಬಂದಿದೆ.
ಸರಕಾರಿ ಮತ್ತು ಅರೆ-ಸರಕಾರಿ ನೌಕರರನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರಿಸಲಾಗಿದೆ. ಅದೇ ರೀತಿ 7,557 ಸರಕಾರಿ ಮತ್ತು ಅರೆ-ಸರ್ಕಾರಿ ನೌಕರರನ್ನು ಆದ್ಯತಾ ಪಡಿತರ ಚೀಟಿ ವರ್ಗದಲ್ಲಿ ಸೇರಿಸಲಾಗಿದೆ. ಈ ಎಲ್ಲರೂ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ಸಿಎಜಿಯು ತನ್ನ ಪ್ರಾಥಮಿಕ ಪರಿಶೀಲನೆ ವೇಳೆ ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ಆದ್ಯತಾ ಪಡಿತರ ಚೀಟಿ (Priority Ration Card) ವರ್ಗದಡಿ ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳನ್ನು ಸೇರ್ಪಡೆ ಮಾಡಿರುವುದು ಆಹಾರ ದತ್ತಾಂಶವನ್ನು ವಾಹನ್ (VAHAN) ದತ್ತಾಂಶವನ್ನು 1 ಜನವರಿ 2016ರಿಂದ, 31 ಮಾರ್ಚ್ 2026ರವರೆಗಿನ ವಾಹನ ನೋಂದಣಿ ಮಾಹಿತಿಯೊಂದಿಗೆ ಹೋಲಿಸಿದೆ. ಇದರ ಪ್ರಕಾರ 79,940 ಮಂದಿ ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳನ್ನು ಆದ್ಯತಾ ಪಡಿತರ ಚೀಟಿ ವರ್ಗದಡಿ ಮುಂದುವರಿಸಲಾಗಿರುವುದು ಕಂಡುಬಂದಿದೆ. ಆರು ತಿಂಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯವಾಗಿದ್ದ ಆದ್ಯತಾ ಪಡಿತರ ಚೀಟಿಗಳನ್ನು ಮುಂದುವರಿಸಿರುವುದನ್ನು ಕಂಡು ಹಿಡಿದಿದೆ.
10,11,666 ಆದ್ಯತಾ ಪಡಿತರ ಚೀಟಿ ಹೊಂದಿರುವವರನ್ನು ಅಮಾನತುಗೊಳಿಸದೆಯೇ ಸತತ ಆರು ತಿಂಗಳವರೆಗೆ ಪಡಿತರವನ್ನು ಪಡೆಯದಿದ್ದರೂ ಆದ್ಯತಾ ಪಡಿತರ ಚೀಟಿ ವರ್ಗದಡಿ ಮುಂದುವರಿಸಲಾಗಿದೆ. ಆದ್ಯತಾ ಪಡಿತರ ಚೀಟಿಗಳ ಎಲ್ಲಾ ಸದಸ್ಯರಿಗೆ ಇ-ಕೆವೈಸಿ ಬಾಕಿ ಇದೆ.
37,30,705 ಆದ್ಯತಾ ಪಡಿತರ ಚೀಟಿಗಳಲ್ಲಿ, ಕುಟುಂಬದ ಎಲ್ಲಾ ಸದಸ್ಯರಿಗೆ ಇ ಕೆವೈಸಿ ಮಾಡ
ಲಾಗಿಲ್ಲ. ಈ ಪಟ್ಟಿಯಲ್ಲಿ ಉಲ್ಲೇಖಿಸಿರುವ ಪ್ರಾಥಮಿಕ ಕಂಡುಬಂದ ಅಂಶಗಳ ಆಧಾರದ ಮೇಲೆ ಅನರ್ಹ ಪಡಿತರ ಚೀಟಿಗಳ ಒಟ್ಟು ಸಂಖ್ಯೆ 13,40,124 ಆಗಿದೆ ಎಂದು ಸಿಎಜಿಯು ತನ್ನ ಆಕ್ಷೇಪಣೆಯಲ್ಲಿ ವಿವರಿಸಿದೆ.
ಲೆಕ್ಕಪರಿಶೋಧನೆಯ ಮಿತಿ/ನಿರ್ಬಂಧಗಳು-ಕುಟುಂಬ ಮತ್ತು ಫ್ರೂಟ್ಸ್ ದತ್ತಾಂಶ ಲಭ್ಯವಿಲ್ಲ. ಅನ್ನಭಾಗ್ಯ ಯೋಜನೆಯ ದತ್ತಾಂಶ ಆಧಾರಿತ ಲೆಕ್ಕಪರಿಶೋಧನೆಗೆ, ಬಿಪಿಎಲ್ ಮತ್ತು ಎಎವೈ ಪಡಿತರ ಚೀಟಿಗಳನ್ನು ಹೊಂದಿರುವ ಫಲಾನುಭವಿಗಳ ಅರ್ಹತೆಯನ್ನು ಪರಿಶೀಲಿಸಲು ಹಾಗೂ ಅನರ್ಹ ಕುಟುಂಬಗಳಿಗೆ ಸೌಲಭ್ಯಗಳನ್ನು ವಿಸ್ತರಿಸಿರುವ ಸಾಧ್ಯತೆಯಿರುವ ಪ್ರಕರಣಗಳನ್ನು ಗುರುತಿಸಲು ಕುಟುಂಬ ಮತ್ತು ಫ್ರೂಟ್ಸ್ ದತ್ತಸಂಚಯಗಳಿಗೆ ಪ್ರವೇಶ ಅಗತ್ಯವಿದೆ.
ಆದರೆ, ಅಗತ್ಯವಿದ್ದ ದತ್ತಾಂಶವನ್ನು ಲೆಕ್ಕಪರಿಶೋಧನೆಗಾಗಿ ಒದಗಿಸಲಾಗಿಲ್ಲ. ಇದರಿಂದ ಕೈಗೊಳ್ಳಬಹುದಾಗಿದ್ದ ದತ್ತಾಂಶ ವಿಶ್ಲೇಷಣೆ ಮತ್ತು ಪರಿಶೀಲನೆಯ ವ್ಯಾಪ್ತಿ ಸೀಮಿತಗೊಂಡಿದೆ. ಕುಟುಂಬ ದತ್ತಾಂಶ ಪಡೆಯಲು ಸಿಎಜಿಗೆ ಯಾವುದೇ ಪ್ರವೇಶ ನೀಡಿಲ್ಲ. ಹೀಗಾಗಿ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಕಹಲವು ಅಂಶಗಳನ್ನು ಪರಿಶೀಲಿಸಲು ಸಿಎಜಿಗೆ ಸಾಧ್ಯವಾಗಿಲ್ಲ.