ಸ್ವಾತಂತ್ರ್ಯ ದಿನಾಚರಣೆಯ ಉಚಿತ ಉಡುಗೊರೆ ಸಂದೇಶಗಳ ಬಗ್ಗೆ ಇರಲಿ ಎಚ್ಚರ!

Update: 2026-08-14 18:46 IST

ಸಾಂದರ್ಭಿಕ ಚಿತ್ರ(AI)

ಸ್ವಾತಂತ್ರ್ಯ ದಿನದ ಉಡುಗೊರೆ ಎಂಬ ನಕಲಿ ಸಂದೇಶವು ವಾಟ್ಸ್ಆಪ್ನಲ್ಲಿ ಹರಡುತ್ತಿದ್ದು, ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು.

ಸ್ವಾತಂತ್ರ್ಯ ದಿನಾಚರಣೆ ಉಡುಗೊರೆ ಎಂದು ವಾಟ್ಸ್ಆಪ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ಶುಭಾಶಯಗಳ ಜೊತೆಗೆ ಉಚಿತ ಕೊಡುಗೆ, ನಗದು ಬಹುಮಾನ ಅಥವಾ ಉಚಿತ ಡೇಟಾ ನೀಡುವುದಾಗಿ ಬರುವ ನಕಲಿ ಲಿಂಕ್ಗಳ ಮೂಲಕ ಸೈಬರ್ ವಂಚನೆ ನಡೆಯುತ್ತಿದೆ. ಇದು ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ಖಾತೆಯನ್ನು ಖಾಲಿ ಮಾಡುವ ಜಾಲವಾಗಿದೆ.

“ಸ್ವಾತಂತ್ರ್ಯ ದಿನಾಚರಣೆ ಉಚಿತ ಉಡುಗೊರೆ” ಅಥವಾ ಉಚಿತ ರಿಚಾರ್ಜ್/ಡೇಟಾ ಎಂದು ನಕಲಿ ಸಂದೇಶ ಕಳುಹಿಸುತ್ತಾರೆ. ಸಂದೇಶದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನಕಲಿ ವೆಬ್ಸೈಟ್ಗೆ ಹೋಗುತ್ತದೆ. ಅಲ್ಲಿ ಸೈಬರ್ ಖದೀಮರು ನಿಮ್ಮ ಹೆಸರು, ಫೋನ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಕದಿಯುತ್ತಾರೆ. ಕೆಲವು ಪ್ರಕರಣಗಳಲ್ಲಿ ಅಪಾಯಕಾರಿ .apk ಫೈಲ್ಗಳನ್ನು ಡೌನ್ಲೋಡ್ ಮಾಡಲು ಒತ್ತಾಯಿಸಬಹುದು.

Full View

ಹೇಗೆ ಬಲೆ ಬೀಸಲಾಗಿದೆ?

• ವಾಟ್ಸ್ಆಪ್ನಲ್ಲಿ ಸಂದೇಶ, ಎಸ್ಎಂಎಸ್ ಅಥವಾ ಸಾಮಾಜಿಕ ತಾಣದಲ್ಲಿ ಸಂದೇಶ ಬರಬಹುದು.

• ಸರ್ಕಾರದಿಂದ ಎಲ್ಲಾ ನಾಗರಿಕರಿಗೆ ಫ್ರೀ ವೋಚರ್ಸ್, ಲ್ಯಾಪ್ಟಾಪ್ಗಳು ಅಥವಾ ಸ್ಮಾರ್ಟ್ ವಾಚ್ಗಳಂತಹ ಉಡುಗೊರೆ ಬಗ್ಗೆ ತಿಳಿಸಬಹುದು.

• ಸಾಮಾನ್ಯವಾಗಿ ಈ ಸಂದೇಶ ಸ್ನೇಹಿತರು ಅಥವಾ ಸಹೋದ್ಯೋಗಿಗಳಿಂದ ಬರಬಹುದು. ಅದೇ ಕಾರಣಕ್ಕೆ ಸಂದೇಶ ನಂಬಲರ್ಹ ಎಂದು ನಿರ್ಧರಿಸಿಬಿಡುತ್ತೇವೆ

• ಒಂದು ಕ್ಲಿಕ್ ಮಾಡುವುದರಿಂದ ಫಿಷಿಂಗ್ ಲಿಂಕ್ ತೆರೆದುಕೊಳ್ಳುತ್ತದೆ.

ವಂಚನೆ ಹೇಗೆ ನಡೆಯುತ್ತದೆ?

• ಲಿಂಕ್ ತೆರೆದಾಗ ಉತ್ತಮ ಸೈಟ್ ಒಂದು ಸಿಗುತ್ತದೆ. ಅದರಲ್ಲಿ ಧ್ವಜಗಳು, ಬ್ರಾಂಡ್ ಲೋಗೋಗಳು ಮತ್ತು “ನನಗೆ ಉಡುಗೊರೆ ಸಿಕ್ಕಿದೆ” ಎನ್ನುವಂತಹ ಕಾಮೆಂಟ್ಗಳನ್ನೂ ನೋಡಬಹುದು.

• ವಂಚನೆಯ ‘ಅದೃಷ್ಟ ಚಕ್ರ’ ಒಂದೆರಡು ಸ್ಪಿನ್ನಲ್ಲಿ ನಿಮಗೆ ಉಡುಗೊರೆ ಗೆಲ್ಲಲು ನೆರವಾಗುತ್ತದೆ.

• ಅದನ್ನು ಕ್ಲೇಮ್ ಮಾಡಲು ನೀವು ಸಂದೇಶವನ್ನು 5 ಗುಂಪುಗಳು ಅಥವ 20 ಸಂಪರ್ಕಗಳಿಗೆ ಕಳುಹಿಸಬೇಕಾಗುತ್ತದೆ

• ನಂತರ ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಬ್ಯಾಂಕ್ ಅಥವಾ ಯುಪಿಐ ವಿವರ ಹಾಕುವಂತೆ ಕೇಳಲಾಗುತ್ತದೆ.

ನಿಮ್ಮ ಹಣ ಹೇಗೆ ಹೋಗುತ್ತದೆ?

• ನಕಲಿ ಪಾವತಿ ಗೇಟ್ವೇ ಮೂಲಕ ಸಣ್ಣ ‘ಪ್ರೊಸೆಸಿಂಗ್ ಫೀ’ ಸಲ್ಲಿಸಿದರೆ ನಿಮ್ಮ ಕಾರ್ಡ್ ಅಥವಾ ಯುಪಿಐ ಡೇಟಾ ಸೆರೆಹಿಡಿಯಲಾಗುತ್ತದೆ.

• ಅಥವಾ ನಿಮ್ಮ ಉಡುಗೊರೆ ತೆಗೆದುಕೊಳ್ಳಲು .apk ಅಪ್ಲಿಕೇಶನ್ ಡೌನ್ಲೋಡ್ ಮಾಡುವುದು ಅಥವಾ ನೋಂದಣಿ ಮಾಡಿಕೊಳ್ಳಲು ಹೇಳಬಹುದು.

• ಆ ಅಪ್ಲಿಕೇಶನ್ನಲ್ಲಿ ಸ್ಪೈವೇರ್ ಅಥವಾ ಬ್ಯಾಂಕಿಂಗ್ ಟ್ರೋಜನ್ ಇರುತ್ತದೆ

• ನಿಜವಾದ ಉಡುಗೊರೆ ಇರುವುದೇ ಇಲ್ಲ.

ನಿಮಗೇನು ನಷ್ಟವಾಗಲಿದೆ?

• ಕಳ್ಳತನಕ್ಕಾಗಿ ಬ್ಯಾಂಕ್ ಮತ್ತು ಯುಪಿಐ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ.

• ಕಾರ್ಡ್ ಡೇಟಾವನ್ನು ನಕಲಿ ಶುಲ್ಕದ ಮೂಲಕ ಸೆರೆಹಿಡಿಯಲಾಗುತ್ತದೆ

• ನಿಮ್ಮ ಫೋನ್ನಲ್ಲಿ ಸ್ಪೈವೇರ್ ಅಥವಾ ಬ್ಯಾಂಕಿಂಗ್ ಟ್ರೋಜನ್ ಇನ್ಸ್ಟಾಲ್ ಮಾಡಲಾಗುತ್ತದೆ.

• ನಿಮ್ಮ ಸಂಪರ್ಕಗಳ ಮೇಲೆ ನಂತರ ನಿಯಂತ್ರಣ ಸಾಧಿಸಲಾಗುತ್ತದೆ. ಏಕೆಂದರೆ ಅದನ್ನು ನೀವು ಫಾರ್ವರ್ಡ್ ಮಾಡಿರುತ್ತೀರಿ.

ಕ್ಲಿಕ್ ಮಾಡುವ ಮೊದಲು ಎಚ್ಚರ

• ಯಾವುದೋ ವೆಬ್ ವಿಳಾಸ ನಿಜವಾದ ಸರ್ಕಾರಿ ಉಡುಗೊರೆಯಾಗಲು ಸಾಧ್ಯವಿಲ್ಲ.

• ನಿಜವಾದ ಸ್ನೇಹಿತರು ಕ್ಲೇಮ್ ಮಾಡುವ ಮೊದಲು ಇತರರಿಗೆ ಸಂದೇಶ ಕಳುಹಿಸುವಂತೆ ಹೇಳುವುದಿಲ್ಲ.

• ಶುಲ್ಕ ತೆರುವುದು ಅಥವಾ .apk ಫೈಲ್ ಡೌನ್ಲೋಡ್ ಇದ್ದರೆ ಖಚಿತವಾಗಿ ಅಪಾಯಕಾರಿ.

• ಸೂಕ್ತ ಉಡುಗೊರೆಗಳು ಅಧಿಕೃತ ಆಪ್ ಸ್ಟೋರ್ಗಳಲ್ಲಿರುತ್ತವೆ. ಬ್ರೌಸರ್ ಡೌನ್ಲೋಡ್ ಡೌನ್ಲೋಡ್ ಮಾಡುವ ಅಗತ್ಯವಿರುವುದಿಲ್ಲ.

ಎಚ್ಚರ ವಹಿಸಿ

• ಫಾರ್ವರ್ಡ್ ಮಾಡಬೇಡಿ ಮತ್ತು ಚೇನ್ ಬ್ರೇಕ್ ಮಾಡಿ.

• ವಿವರ ಹಾಕಿದ್ದರೆ ಪಾಸ್ವರ್ಡ್ ಬದಲಿಸಿ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನು ಗಮನಿಸುತ್ತಿರಿ.

• ಆಪ್ ಡೌನ್ಲೋಡ್ ಮಾಡಿದ್ದರೆ ಆಫ್ಲೈನ್ಗೆ ಹೋಗಿ ಅನ್ಇನ್ಸ್ಟಾಲ್ ಮಾಡಿ. ಆಂಟಿವೈರಸ್ ಸ್ಕ್ಯಾನ್ ಮಾಡಿ.

• 1930 ಸಂಖ್ಯೆಗೆ ದೂರುಕೊಡಿ ಅಥವಾ ಸೈಬರ್ಕ್ರೈಮ್ ವೆಬ್ಸೈಟ್ಗೆ ದೂರು ಕೊಡಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News