×
Ad

ನಿಮ್ಮ Gmail ವಿಳಾಸ ಇಷ್ಟವಿಲ್ಲವೆ? 2026ರಲ್ಲಿ ನಿಮಗೆ ವಿಳಾಸ ಬದಲಿಸುವ ಅವಕಾಶ ಸಿಗಲಿದೆ

Update: 2025-12-25 22:12 IST

ಸಾಂದರ್ಭಿಕ ಚಿತ್ರ | Photo Credit : freepik

Google ಸದ್ದಿಲ್ಲದೇ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದೆ. ಅದರಲ್ಲಿ ನಿಮ್ಮ Gmail ವಿಳಾಸವನ್ನು ಮೂರು ಬಾರಿ ಬದಲಿಸುವ ಅವಕಾಶ ನೀಡಲಾಗುತ್ತಿದೆ. ಆದರೆ ಸದ್ಯ ಎಲ್ಲರಿಗೂ ಈ ಸೌಲಭ್ಯ ಲಭ್ಯವಿಲ್ಲ.

ಬಹಳ ವರ್ಷಗಳಿಂದ Gmail ವಿಳಾಸವೆಂದರೆ ಶಾಶ್ವತ ಡಿಜಿಟಲ್ ಗುರುತು ಆಗಿತ್ತು. ಅದನ್ನು ಒಮ್ಮೆ ಬಳಸಿದರೆ ಬದಲಿಸುವ ಅವಕಾಶವಿರಲಿಲ್ಲ. ಆದರೆ ಇದೀಗ ಆ ಹಳೇ ನಿಯಮವನ್ನು Gmail ಬದಲಿಸುವ ಸಾಧ್ಯತೆಯಿದೆ. Google ಇದೀಗ ಬಳಕೆದಾರರಿಗೆ ತಮ್ಮ Gmail ವಿಳಾಸವನ್ನು ಮಾರ್ಪಡಿಸುವ ಅವಕಾಶವನ್ನು ನೀಡುತ್ತಿದೆ. Gmail ಬಳಕೆದಾರರಿಗೆ ತಮ್ಮ ಹಳೇ ವಿಳಾಸವನ್ನು ಹೊಸದಾಗಿ ನವೀಕರಿಸುವ ಅವಕಾಶ ಸಿಗಲಿದೆ. ಸಂಪೂರ್ಣವಾಗಿ ಹೊಸ ಖಾತೆಯನ್ನು ತೆರೆಯುವ ಬದಲಾಗಿ ಹಳೆಯದಾದ ಬಳಸದ email ವಿಳಾಸವನ್ನೇ ಮತ್ತೆ ನವೀಕರಿಸಿಕೊಳ್ಳಬಹುದಾಗಿದೆ.

email ವಿಳಾಸ ಬದಲಿಸುವ ಅವಕಾಶ

ಹಿಂದಿಯಲ್ಲಿ ಪ್ರಕಟಿಸಿದ Gmail ಸಪೋರ್ಟ್ ಪುಟದಲ್ಲಿ ಅದು ಹೊಸ ಆಯ್ಕೆಯೊಂದನ್ನು ಬಳಕೆದಾರರಿಗೆ ನೀಡುತ್ತಿರುವುದಾಗಿ ತಿಳಿಸಿದೆ. “@gmail.com” ಎಂದೇ ಕೊನೆಯಾಗುತ್ತಿದ್ದರೂ ಬಳಕೆದಾರರು ಅದನ್ನು ಬದಲಿಸಬಹುದಾಗಿದೆ. ಈವರೆಗೆ Google ತೃತೀಯ ಪಕ್ಷದ email ವಿಳಾಸದಿಂದ ಸೈನಪ್ ಆದವರಿಗೆ ಮಾತ್ರ ಖಾತೆಯ email ಹೆಸರನ್ನು ಬದಲಿಸಲು ಅವಕಾಶ ಕೊಡುತ್ತಿತ್ತು. Gmail ವಿಳಾಸವನ್ನು ಮಾರ್ಪಡಿಸುವ ಅವಕಾಶವಿರಲಿಲ್ಲ.

ಎರಡೂ ವಿಳಾಸ ಬಳಸಬಹುದು

ಒಮ್ಮೆ ನೀವು ಹೊಸ email ವಿಳಾಸವನ್ನು ಆರಿಸಿದ ನಂತರ ನಿಮ್ಮ ಹಳೆಯ Gmail ವಿಳಾಸವನ್ನು Google ಅಲಿಯಾಸ್ ಎಂದು ಪರಿಗಣಿಸಬಹುದು. ಅಂದರೆ ನೀವು ಈ ಯಾವುದೇ ಎರಡು Google ಸೇವೆಗಳಿಂದ ಸೈನ್ ಇನ್ ಮಾಡಬಹುದಾಗಿದೆ. Gmail ಹೇಳುವ ಪ್ರಕಾರ ಬಳಕೆದಾರರು ಎರಡೂ ಹೊಸ ಮತ್ತು ಹಳೆಯ ವಿಳಾಸಗಳಿಗೆ ಇಮೇಲ್‌ ಗಳನ್ನು ಸ್ವೀಕರಿಸಬಹುದಾಗಿದೆ. ಹಳೇ ವಿಳಾಸದಲ್ಲಿರುವ ಫೋಟೋಗಳು ಮತ್ತು ಇಮೇಲ್‌ ಗಳಿಗೆ ಸಮಸ್ಯೆಯಾಗದು.

►ಈ ಕೆಳಗಿನ ಹಾದಿಯಲ್ಲಿ ನೀವು ಹೊಸ ವಿಳಾಸವನ್ನು ನವೀಕರಿಸಬಹುದಾಗಿದೆ.

►ಮೂರು ಬಾರಿ ಮಾತ್ರ ಬದಲಿಸಬಹುದು

ಬಳಕೆದಾರರು ತಮ್ಮ ಹಳೇ Google ಖಾತೆಯ email ವಿಳಾಸವನ್ನು ಬಳಸಲು ಸಾಧ್ಯವಾಗುತ್ತಿದೆಯಾದರೂ, Google ನಿಮಗೆ ವರ್ಷದವರೆಗೆ ಹೊಸ email ವಿಳಾಸವನ್ನು ಸೃಷ್ಟಿಸಲು ಅವಕಾಶ ಕೊಡುವುದಿಲ್ಲ. ಬಳಕೆದಾರರು ತಮ್ಮ email ವಿಳಾಸವನ್ನು ಒಟ್ಟು ಮೂರು ಬಾರಿಯಷ್ಟೇ ಬದಲಿಸಬಹುದಾಗಿದೆ.

►ಸೌಲಭ್ಯ ಖಾತೆಗೆ ಬರಲು ತಡವಾಗಬಹುದು

ಸಪೋರ್ಟ್ ಪುಟದಲ್ಲಿ ಇನ್ನೂ ಕೆಲವು ವಿವರಗಳು ಇವೆ. ಆದರೆ ಆ ಬದಲಾವಣೆಗಳು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೊಸ ವಿಳಾಸವನ್ನು ಆರಿಸುವ ಸಾಮರ್ಥ್ಯ ನೀಡುವುದನ್ನು ನಿಧಾನವಾಗಿ ಜಾರಿಗೆ ತರುವ ಸಾಧ್ಯತೆಯಿದೆ. ಆರಂಭದಲ್ಲಿ ಎಲ್ಲರಿಗೂ ಈ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ನಿಮ್ಮ ಖಾತೆಯಲ್ಲಿ ಅಂತಹ ಅವಕಾಶ ಬರಲು ನೀವು ಕಾಯಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News