ಮನುಸ್ಮೃತಿ ಸುಟ್ಟಿದ್ದು ಫ್ರಾನ್ಸ್ ಕ್ರಾಂತಿಯಷ್ಟೇ ಮಹತ್ವದ್ದು
ಇಂದು ಅಂಬೇಡ್ಕರ್ ಮನುಸ್ಮೃತಿ ದಹಿಸಿದ ದಿನ
ಹಿಂದೂ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆ ಯಾವ ಬಂಡೆಯ ಮೇಲೆ ಕಟ್ಟಲ್ಪಟ್ಟಿದೆ ಎಂದರೆ ಮನುಸ್ಮತಿಯ ಮೇಲೆ. ಅದು(ಮನುಸ್ಮತಿ) ಹಿಂದೂ ಶಾಸನದ ಭಾಗವಾಗಿದೆ. ಆದ್ದರಿಂದ ಅದು ಹಿಂದೂಗಳಿಗೆ ಪವಿತ್ರವಾಗಿದೆ. ಅಂದಹಾಗೆ ಪವಿತ್ರವಾಗಿರುವುದರಿಂದ ಅದು ದೋಷಾತೀತ
ವಾಗಿದೆ. ಆ ಕಾರಣದಿಂದ ಪ್ರತಿಯೊಬ್ಬ ಹಿಂದೂ ಅದರ ಪಾವಿತ್ರ್ಯವನ್ನು ನಂಬುತ್ತಾನೆ ಮತ್ತು ಅದು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸುತ್ತಾನೆ. ಈ ದಿಸೆಯಲ್ಲಿ ಮನು ಜಾತಿ ಮತ್ತು ಅಸ್ಪಶ್ಯತೆಯನ್ನು ಎತ್ತಿಹಿಡಿಯುತ್ತಾನಷ್ಟೇ ಅಲ್ಲ , ಅವುಗಳಿಗೆ ಕಾನೂನಿನ ಮುದ್ರೆಯೊತ್ತುತ್ತಾನೆ. ಆದ್ದರಿಂದ ನಾವು(ಅಸ್ಪಶ್ಯರು) ಮನುಸ್ಮತಿಯನ್ನು ಸುಟ್ಟಿದ್ದು ಒಂದು ಶ್ರೇಷ್ಠ ಮಟ್ಟದ ಧೈರ್ಯದ ಕ್ರಿಯೆಯಾಗಿತ್ತು. ನಿಜ ಹೇಳಬೇಕೆಂದರೆ ಒಂದರ್ಥದಲ್ಲಿ ಅದು ಹಿಂದೂ ಧರ್ಮದ ಮೂಲ ಕೋಟೆಯ ಮೇಲೆ ನಡೆದ ದಾಳಿಯಾಗಿತ್ತು. ಹೇಗೆಂದರೆ ಹೇಗೆ ಬೇಸಿಲ್ಲೆ(ಸೆರೆಮನೆ)ಯು ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಫ್ರಾನ್ಸ್‌ನ ಹಳೆಯ ಆಡಳಿತದ ಆತ್ಮದ ಸಾಕಾರ ರೂಪವಾಗಿತ್ತೋ ಹಾಗೆಯೇ ಅಸಮಾನತೆಯ ಆತ್ಮದ ಸಾಕಾರರೂಪ
ವಾಗಿದ್ದ ಮನುಸ್ಮತಿ ಹಿಂದೂಗಳ ಜೀವನ ಮತ್ತು ಚಿಂತನೆಯ ಮೂಲ ಆಧಾರವಾಗಿತ್ತು. ಆದ್ದರಿಂದ ಅಸ್ಪಶ್ಯರ ವಿಮೋಚನೆಯ ಇತಿಹಾಸದಲ್ಲಿ 1927ರಲ್ಲಿ ಮಹಾಡ್ ನಗರದಲ್ಲಿ ಅಸ್ಪಶ್ಯರು ಮನುಸ್ಮತಿ ಸುಟ್ಟಿದ್ದು ಫ್ರಾನ್ಸ್‌ನ ಕ್ರಾಂತಿಯ ಸಂದರ್ಭದಲ್ಲಿ ಬೇಸಿಲ್ಲೆ (ಸೆರೆಮನೆ) ಕುಸಿದು ಜನರು ಯೂರೋಪ್‌ನಲ್ಲಿ ಬಿಡುಗಡೆಗೊಂಡಷ್ಟೇ ಮಹತ್ವದ್ದಾಗಿದೆ, ಮುಖ್ಯವಾದದ್ದಾಗಿದೆ’’.
ಡಾ. ಬಾಬಾಸಾಹೇಬ್ ಅಂಬೇಡ್ಕರ್
(ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.5, ಪು. 255,
ಕನ್ನಡಕ್ಕೆ: ರಹೊಬ)