ಕಾರನ್ನು ಹೂಡಿಕೆದಾರರಿಂದ ಮರೆಮಾಚಿದ್ದ ಸ್ಟೀವ್ ಜಾಬ್ಸ್; ಪೋರ್ಷೆ ಕುರಿತ ಭಿನ್ನ ಧೋರಣೆ!
ಸ್ಟೀವ್ ಜಾಬ್ಸ್ | Photo Credit : AP
ಆಪಲ್ ಕಂಪನಿಯ ಇಬ್ಬರು ಸಿಇಒಗಳು ಜರ್ಮನ್ ಸ್ಪೋರ್ಟ್ಸ್ ಕಾರ್ ತಯಾರಕರ ವಿಷಯದಲ್ಲಿ ಭಿನ್ನ ಧೋರಣೆಗಳನ್ನು ಹೊಂದಿದ್ದರು. 1987ರಲ್ಲಿ ಹೂಡಿಕೆದಾರರೊಂದಿಗಿನ ಸಭೆಯ ಮೊದಲು ಸ್ಟೀವ್ ಜಾಬ್ಸ್ ತಮ್ಮ ಪೋರ್ಷೆ ಕಾರನ್ನು ಅವಸರದಿಂದ ಮರೆಮಾಚಿದ್ದರು. ಏಕೆಂದರೆ ಆರ್ಥಿಕ ಸಂಕಷ್ಟದಲ್ಲಿದ್ದ ತಮ್ಮ 'NeXT' ಎಂಬ ಸ್ಟಾರ್ಟಪ್ ಕಂಪನಿಯು ಅತಿಯಾದ ಹಣದ ಸಂಪನ್ಮೂಲವನ್ನು ಹೊಂದಿದೆ ಎಂಬಂತೆ ಕಾಣಬಾರದು ಎಂದು ಅವರು ಬಯಸಿದ್ದರು. ಇದೀಗ ಸುಮಾರು ನಲವತ್ತು ವರ್ಷಗಳ ನಂತರ ಆಪಲ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಜಾನ್ ಟರ್ನಸ್ ಅತ್ಯಂತ ಅಪರೂಪದ ಮತ್ತು ಕೇವಲ ರೇಸ್ ಟ್ರ್ಯಾಕ್ಗಳಿಗಾಗಿಯೇ ನಿರ್ಮಿಸಲಾದ ಪೋರ್ಷೆ ಕಾರುಗಳಲ್ಲಿ ಒಂದನ್ನು ಹೊಂದಿದ್ದಾರೆ ಮತ್ತು ಕ್ಯಾಲಿಫೋರ್ನಿಯದ ರೇಸ್ ಟ್ರ್ಯಾಕ್ಗಳಲ್ಲಿ ಅದನ್ನು ಅದರ ಗರಿಷ್ಠ ಸಾಮರ್ಥ್ಯದವರೆಗೆ ಚಲಾಯಿಸುತ್ತಾರೆ.
ಸ್ಟೀವ್ ಜಾಬ್ಸ್ ಪೋರ್ಷೆ ಕಾರನ್ನು ಮರೆಮಾಚಿದ ದಿನ:
ಸ್ಟೀವ್ ಜಾಬ್ಸ್ ಆಪಲ್ನಿಂದ ಹೊರಬಂದ ನಂತರ ಅವರು ಸ್ಥಾಪಿಸಿದ 'NeXT' ಕಂಪನಿಗೆ ಸಂಬಂಧಿಸಿ ತಮ್ಮ ಕಾರನ್ನು ಮರೆ ಮಾಚಿದ್ದರು. ಈ ಕಂಪನಿಯನ್ನು ಮುಂದೆ ಆಪಲ್ ಸ್ವಾಧೀನಪಡಿಸಿಕೊಂಡು ಅದರ ತಂತ್ರಜ್ಞಾಣವನ್ನು 'OS X' ನ ಸಾಫ್ಟ್ವೇರ್ ಆಧಾರವಾಗಿ ಬಳಸಿಕೊಂಡಿದೆ. 'NeXT' ನ ಮಾಜಿ ಎಂಜಿನಿಯರ್ ರಾಂಡಿ ಆಡಮ್ಸ್ ಹೇಳಿರುವ ಪ್ರಕಾರ, “ಹೂಡಿಕೆ ಕುರಿತ ಸಭೆಗಾಗಿ ಬಿಲಿಯನೇರ್ ಉದ್ಯಮಿ ರಾಸ್ ಪೆರೋಟ್ ಆಗಮಿಸುವ ಸ್ವಲ್ಪ ಸಮಯದ ಮೊದಲು ಜಾಬ್ಸ್ ಕೆಲಸದ ಸ್ಥಳಕ್ಕೆ ಧಾವಿಸಿ ಬಂದರು. “ರಾಂಡಿ ನಾವು ಪೋರ್ಷೆ ಕಾರುಗಳನ್ನು ಮರೆಮಾಚಬೇಕು” ಎಂದು ಹೇಳಿದರು. ಅಂದು ಬೆಳಗಿನವರೆಗೂ ಕಾರಿನ ಬಾಗಿಲು ತಗುಲಿ ಬಣ್ಣ ಹಾಳಾಗುವುದನ್ನು ತಪ್ಪಿಸಲು ಜಾಬ್ಸ್ ಮತ್ತು ಆಡಮ್ಸ್ ತಮ್ಮ ವೈಯಕ್ತಿಕ ವಾಹನಗಳನ್ನು ಮೂರು ಪಾರ್ಕಿಂಗ್ ಜಾಗಗಳಲ್ಲಿ ಅಡ್ಡಲಾಗಿ ನಿಲ್ಲಿಸುತ್ತಿದ್ದರು. ‘ಐಷಾರಾಮಿ ಸ್ಪೋರ್ಟ್ ಕಾರುಗಳ ನಡುವೆ ಕಚೇರಿಗೆ ಬರುವುದರಿಂದ ತಮ್ಮ ಹೊಸ ಕಂಪನಿಗೆ ಹಣದ ಅಗತ್ಯವಿಲ್ಲ ಎಂಬ ಭಾವನೆಯನ್ನು ಪೆರೋಟೆ ಅವರಲ್ಲಿ ಮೂಡಿಸಬಹುದು’ ಎಂದು ಆತಂಕಗೊಂಡ ಸ್ಟೀವ್ ಜಾಬ್ಸ್, ವಾಹನಗಳನ್ನು 'NeXT' ನ ಪಾಲೊ ಆಲ್ಟೊ ಕಟ್ಟಡದ ಹಿಂಭಾಗದಲ್ಲಿ ಯಾರಿಗೂ ಕಾಣದಂತೆ ಸ್ಥಳಾಂತರಿಸುವಂತೆ ಮಾಡಿದರು. ಈ ಸರಳ ಹಾಗೂ ಅಡಗಿದಂತಿದ್ದ ನೋಟವು ಕೆಲಸ ಮಾಡಿತು. ಪೆರೋಟ್ ಕಂಪನಿಯಲ್ಲಿ 20 ದಶಲಕ್ಷ ಡಾಲರ್ ಹೂಡಿಕೆ ಮಾಡಿದ್ದರು.
ಭಿನ್ನ ಧೋರಣೆ ಹೊಂದಿರುವ ಜಾನ್ ಟರ್ನಸ್
ಜಾನ್ ಟರ್ನಸ್ ಈ ಬ್ರ್ಯಾಂಡ್ ಜೊತೆಗೆ ಸಂಪೂರ್ಣವಾಗಿ ಭಿನ್ನವಾದ ಸಂದರ್ಭದಲ್ಲಿ ಅಂದರೆ ಹವ್ಯಾಸಿ ಮೋಟಾರ್ ಸ್ಪೋರ್ಟ್ನಲ್ಲಿ ತೊಡಗಿಸಿಕೊಂಡಿದ್ದಾರೆ. ಮೋಟಾರ್ 1 ಪ್ರಕಾರ ಟರ್ನಸ್ ಟ್ರ್ಯಾಕ್-ಎಕ್ಸ್ಕ್ಲೂಸಿವ್ ಪೋರ್ಷೆ 935ರ ಕೇವಲ 77 ಯುನಿಟ್ಗಳಲ್ಲಿ ಒಂದನ್ನು ಹೊಂದಿದ್ದಾರೆ. ಈ ವಾಹನದ ಮೂಲ ಬೆಲೆ 800,000 ಡಾಲರ್ ಆಗಿರುತ್ತದೆ ಮತ್ತು ಬಹಳ ಉತ್ತಮವಾದ ಯಾಂತ್ರಿಕ ಶಕ್ತಿಯನ್ನು ಹೊಂದಿದೆ. ಇದರ ಎಂಜಿನ್ ಔಟ್ಪುಟ್ 3.8-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ಫ್ಲಾಟ್-ಸಿಕ್ಸ್ ಮೂಲಕ 700 ಹಾರ್ಸ್ಪವರ್ ಹೊಂದಿದೆ. 3,042 ಪೌಂಡ್ಗಳ (ಸುಮಾರು 1380 ಕೆಜಿ) ಹಗುರವಾದ ಫ್ರೇಮ್ ಹೊಂದಿದೆ. ಇದನ್ನು ಖಾಸಗಿ ಟ್ರ್ಯಾಕ್ ಇವೆಂಟ್ಗಳು, ಕ್ಲಬ್ ಸ್ಪೋರ್ಟ್ ಸೆಷನ್ಗಳು ಮತ್ತು ಚಾಲಕರ ತರಬೇತಿ ಕೇಂದ್ರಕ್ಕೆ ಮಾತ್ರ ಸೀಮಿತವಾಗಿರುವ ವಾಹನವಾಗಿದೆ. ರಸ್ತೆಯಲ್ಲಿ ಚಲಾಯಿಸಲು ಕಾನೂನುಬದ್ಧ ಅನುಮತಿ ಇಲ್ಲ ಮತ್ತು ಸಾಂಪ್ರದಾಯಿಕ ರೇಸ್ ಚಾಂಪಿಯನ್ಶಿಪ್ ಅಂಗೀಕರವನ್ನೂ ಹೊಂದಿಲ್ಲ. ಸ್ಥಿರ ಹಣಕಾಸು ಆಸ್ತಿಯಾಗಿ ಶೋರೂಂನಲ್ಲಿ ವಾಹನವನ್ನು ಲಾಕ್ ಮಾಡುವ ಬದಲು ಟರ್ನಸ್ ಕಾರನ್ನು ವೆದರ್ಟೆಕ್ ರೇಸ್ವೇ ಲಗುನಾ ಸೆಕಾದಲ್ಲಿ ಓಡಿಸುತ್ತಾರೆ. ಅವರು 1 ನಿಮಿಷ ಮತ್ತು 40 ಸೆಕೆಂಡುಗಳಿಗಿಂತ ಕಡಿಮೆ ಲ್ಯಾಪ್ ಸಮಯ ಹೊಂದಿದ್ದಾರೆ. ಅಂದರೆ ವೃತ್ತಿಪರರಲ್ಲದ ಚಾಲಕರಿಗೆ ತ್ವರಿತ ವೇಗ ಹೊಂದಿದ್ದಾರೆ.
ಸರ್ಕ್ಯೂಟ್ ರೇಸಿಂಗ್ ಬಗ್ಗೆ ಟರ್ನಸ್ ಅವರ ಉತ್ಸಾಹವು ಅವರ ತಾಂತ್ರಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತದೆ. 2026 ಸೆಪ್ಟೆಂಬರ್ 1 ರಂದು ಆಪಲ್ನ ಸಿಇಒ ಹುದ್ದೆಗೆ ಏರುವ ಮೊದಲು ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದರು. 2001ರಲ್ಲಿ ಆಪಲ್ನ ಕಾರ್ಯ ನಿರ್ವಾಹಕ ನಾಯಕತ್ವ ತಂಡವನ್ನು ಸೇರಿದರು. ಫಾರ್ಮುಲಾ 1 ಮತ್ತು ಸ್ಪರ್ಧಾತ್ಮಕ ಮೋಟಾರ್ ಸ್ಪೋರ್ಟ್ನ ಸಕ್ರಿಯ ಅನುಯಾಯಿ, ಆಪಲ್ ಸೇವೆಗಳ ಮುಖ್ಯಸ್ಥ ಎಡ್ಡಿ ಕ್ಯೂ ಅವರೂ ಇದಕ್ಕೆ ಮೊದಲು ಅರ್ನಸ್ನ ಹವ್ಯಾಸಿ ಟ್ರ್ಯಾಕ್ ಚಾಲನೆಯಲ್ಲಿ ಭಾಗವಹಿಸುವುದನ್ನು ಎತ್ತ ತೋರಿಸಿದ್ದರು.
ಒಂದೆಡೆ ಸ್ಟೀವ್ ಜಾಬ್ಸ್ ಕಾರನ್ನು ಕಚೇರಿ ಗೋಡೆಯ ಹಿಂದೆ ಮರೆ ಮಾಡುವ ಹೊಣೆಗಾರಿಕೆಯಾಗಿ ನೋಡಿದರೆ ಮತ್ತೊಂದೆಡೆ ಅರ್ನಸ್ ಅತಿ ಅಪರೂಪದ ಯಂತ್ರವನ್ನು ಎಂಜಿನಿಯರಿಂಗ್ ಅದ್ಭುತವಾಗಿ ಪರಿಗಣಿಸುತ್ತಿದ್ದಾರೆ.