ಆನೆಗಳು ಮತ್ತು ಫ್ಲೆಮಿಂಗೊಗಳು ನಿಂತೇ ನಿದ್ರೆ ಮಾಡುವುದೇಕೆ?
ಸಾಂದರ್ಭಿಕ ಚಿತ್ರ | Photo Credit : PTI
ಪರಭಕ್ಷಕಗಳ ಬಗ್ಗೆ ಎಚ್ಚರವಾಗಿರಲು, ಹಿಂಡಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಅಥವಾ ಮಲಗುವುದು ತುಂಬಾ ಅಪಾಯಕಾರಿ ಅಥವಾ ಶಕ್ತಿಯನ್ನು ಬರಿದಾಗಿಸುತ್ತದೆ ಎಂದು ಅನಿಸಿದಾಗ ನಿಂತುಕೊಂಡೇ ನಿದ್ರೆ ತೂಗುವುದು ಈ ಜೀವಿಗಳಿಗೆ ಅಭ್ಯಾಸವಾಗಿ ಹೋಗಿದೆ.
ಜೀವಿಗಳು ತಮ್ಮ ಕಾಲ ಮೇಲೆ ಮಲಗುವುದು ನೋಡಿದ್ದೀರಾ? ಬಹಳಷ್ಟು ಜೀವಿಗಳಿಗೆ ಕಾಲಿನ ಮೇಲೆ ನಿಂತೇ ನಿದ್ರೆ ತೂಗುವುದು ಅಭ್ಯಾಸ ಮಾತ್ರವಲ್ಲ ಬದುಕುಳಿಯುವ ಒಂದು ತಂತ್ರವೂ ಆಗಿದೆ. ಪರಭಕ್ಷಕಗಳ ಬಗ್ಗೆ ಎಚ್ಚರವಾಗಿರಲು, ಹಿಂಡಿನಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಅಥವಾ ಮಲಗುವುದು ತುಂಬಾ ಅಪಾಯಕಾರಿ ಅಥವಾ ಶಕ್ತಿಯನ್ನು ಬರಿದಾಗಿಸುತ್ತದೆ ಎಂದು ಅನಿಸಿದಾಗ ನಿಂತುಕೊಂಡೇ ನಿದ್ರೆ ತೂಗುವುದು ಈ ಜೀವಿಗಳಿಗೆ ಅಭ್ಯಾಸವಾಗಿ ಹೋಗಿದೆ. ಈ ಜೀವಿಗಳು ನಿದ್ರೆಯ ಕುರಿತ ನಮ್ಮ ಅರ್ಥೈಸಿಕೊಳ್ಳುವಿಕೆಯನ್ನೇ ಬದಲಿಸಿವೆ ಎಂದರೆ ತಪ್ಪಾಗದು. ಹೀಗೆ ನಿಂತೇ ನಿದ್ರಿಸುವ 5 ಪ್ರಾಣಿಗಳ ವಿವರ ಇಲ್ಲಿದೆ;
ಕುದುರೆಗಳು
Photo ; chatgpt.com
ಕುದುರೆಗಳು ತಮ್ಮ ಕಾಲುಗಳಲ್ಲಿ ‘ಸ್ಟೇ ಅಪರಟಸ್’ ಅನ್ನು ಹೊಂದಿರುತ್ತವೆ. ಈ ಸ್ಟೇ ಅಪರಟಸ್ ಸ್ನಾಯು ರಜ್ಜುಗಳು ಮತ್ತು ಅಸ್ಥಿರಜ್ಜುಗಳ ವ್ಯವಸ್ಥೆಯಾಗಿದ್ದು, ಕೀಲುಗಳನ್ನು ಲಾಕ್ ಮಾಡಲು ಮತ್ತು ಬೀಳದೆ ನಿಂತೇ ಮಲಗಲು ಅನುವು ಮಾಡಿಕೊಡುತ್ತದೆ. “ಕುದುರೆಗಳು ಮಲಗಿದರೆ ಏಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಪರಭಕ್ಷಕಗಳ ದಾಳಿಗೆ ಸುಲಭವಾಗಿ ಗುರಿಯಾಗುತ್ತವೆ. ತಮ್ಮನ್ನು ರಕ್ಷಿಸಿಕೊಳ್ಳಲು ಕುದುರೆಗಳು ನಿಂತೇ ನಿದ್ರಿಸುತ್ತವೆ” ಎಂದು ಬ್ರಿಟಾನಿಕದಲ್ಲಿ ವಿವರವಿದೆ.
ಆನೆಗಳು
Photo Credit : PTI
ಆನೆಗಳು ಮಲಗಿ ದೀರ್ಘನಿದ್ರೆ ಮಾಡುವುದು ಅಪರೂಪ. ನಿಂತೇ ನಿದ್ರೆ ಮಾಡುತ್ತಿರುತ್ತವೆ. ಮುಖ್ಯವಾಗಿ ಕಾಡಾನೆಗಳು ಕಾಡಿನಲ್ಲಿರುವಾಗ ನಿಂತೇ ನಿದ್ರಿಸುತ್ತವೆ. ಕಾಡಿನಲ್ಲಿ ಅವುಗಳು ಅಪಾಯಗಳಿಗೆ ಪ್ರತಿಕ್ರಿಯಿಸಲು ಸಿದ್ಧವಾಗಿರಬೇಕು. ಬೃಹತ್ ಗಾತ್ರದಿಂದಾಗಿ ಮಲಗುವುದು ಮತ್ತು ಏಳುವುದಕ್ಕೆ ಬಹಳ ಶಕ್ತಿಯ ನಷ್ಟವಾಗುತ್ತದೆ ಮತ್ತು ಅಪಾಯಗಳಿಗೆ ತಕ್ಷಣವೇ ಪ್ರತಿಕ್ರಿಯಿಸಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ನೆಲ ಸಮತಟ್ಟಾಗಿಲ್ಲದೆ ಇದ್ದರೆ ಏಳುವುದು ಇನ್ನಷ್ಟು ಕಷ್ಟವಾಗಿಬಿಡುತ್ತದೆ.
ಜಿರಾಫೆಗಳು
Photo Credit : PTI
ಜಿರಾಫೆಗಳೂ ಆನೆಗಳಂತೆಯೇ ಯಾವುದೇ ಅಪಾಯವಿಲ್ಲದ ಸಂದರ್ಭದಲ್ಲಿ ಮಲಗಿರುತ್ತವೆ. ತಮ್ಮ ತಲೆಯನ್ನು ಆರಾಮವಾಗಿ ತಮ್ಮ ಕಾಲುಗಳ ಮೇಲೆ ಒರಗಿಸಿ ಮಲಗುತ್ತವೆ. ಜಿರಾಫೆಗಳು ಅಲ್ಪಾವಧಿಗೆ ಮಾತ್ರ ನಿಂತು ಮಲಗುತ್ತವೆ. ಕೆಲವೊಮ್ಮೆ ನಿಂತು ದೀರ್ಘವಾಗಿ ಮಲಗುವುದೂ ಇದೆ. ನಿಂತೇ ನಿದ್ರೆ ಮಾಡುವುದರಿಂದ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವುದು ಮತ್ತು ಜಾಗೃತವಾಗಿರುವುದು ಸರಳವಾಗುತ್ತದೆ.
ದನಗಳು
Photo Credit : PTI
ದನಗಳು ನಿಂತಿರುವಾಗ ಲಘುವಾಗಿ ನಿದ್ರೆಗೆ ಜಾರುತ್ತವೆ. ಆದರೆ ದೀರ್ಘವಾಗಿ ನಿದ್ರೆಗೆ ಜಾರಬೇಕೆಂದರೆ ಅವುಗಳು ನೆಲಕ್ಕೆ ಒರಗಿ ಮಲಗಿಬಿಡುತ್ತವೆ. ನಿಂತು ನಿದ್ರೆಗೆ ಜಾರುವ ಅವುಗಳ ಸಾಮರ್ಥ್ಯವು ಹಿಂಡಿನ ಪರಿಸರದಲ್ಲಿ ಅರ್ಧ ಎಚ್ಚರವಾಗಿರಲು ಸಹಾಯ ಮಾಡುತ್ತವೆ.
ಫ್ಲೆಮಿಂಗೊಗಳು
Photo Credit : PTI
ಫ್ಲೆಮಿಂಗೊ ಪಕ್ಷಿಗಳು ಒಂದು ಕಾಲಿನ ಮೇಲೆ ನಿದ್ರೆಗೆ ಜಾರುವುದಕ್ಕೆ ಪ್ರಸಿದ್ಧಿಪಡೆದಿವೆ. ಹೀಗೆ ಒಂದು ಕಾಲಿನಲ್ಲಿ ನಿಲ್ಲುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಅವುಗಳಿಗೆ ಸಹಾಯವಾಗುತ್ತದೆ. “ಪಕ್ಷಿಗಳು ತಮ್ಮ ಕಾಲುಗಳು ಮತ್ತು ಪಾದಗಳ ಮೂಲಕ ಹೆಚ್ಚಿನ ಶಾಖವನ್ನು ಕಳೆದುಕೊಳ್ಳುವುದರಿಂದ ಒಂದು ಕಾಲನ್ನು ದೇಹಕ್ಕೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳುವುದರಿಂದ ಅವು ಬೆಚ್ಚಗಿರಲು ಸಹಾಯವಾಗುತ್ತದೆ” ಎಂದು ಬ್ರಿಟಾನಿಕದಲ್ಲಿ ವಿವರಗಳಿವೆ. ಅವುಗಳ ಕಾಲಿನ ಸ್ನಾಯುಗಳು ದೇಹಕ್ಕೆ ಅಂಟಿಕೊಂಡು ಲಾಕ್ ಆಗಿಬಿಡುತ್ತವೆ, ಹೀಗಾಗಿ ಸಮತೋಲನ ಸಾಧಿಸುವುದು ಮತ್ತು ಶ್ರಮವಿಲ್ಲದೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತದೆ.
ಕೃಪೆ: indianexpress.com