ಅಂಬೇಡ್ಕರ್ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ: ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ: ಸಂವಿಧಾನ ಶಿಲ್ಪಿ ಡಾಬಿಆರ್ ಅಂಬೇಡ್ಕರ್ ರವರ 69ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಜಗತ್ತೇ ಮೆಚ್ಚುವಂತಹ ಮತ್ತು ಸರ್ವ ಸಮುದಾಯಗಳಿಗೆ ಸಮಾನ ಅವಕಾಶ, ನ್ಯಾಯ ಸಿಗುವಂತಹ ಶ್ರೇಷ್ಠ ಸಂವಿಧಾನ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ಬಣ್ಣಿಸಿದರು. ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ರಾಷ್ಟ್ರನಿರ್ಮಾಣಕಾರರಾಗಿ ಅವರ ಅವಿರತ ಶ್ರಮ ಮತ್ತು ಪ್ರಯತ್ನಗಳು ಆಧುನಿಕ ಭಾರತಕ್ಕೆ ಭದ್ರ ಬುನಾದಿ ಹಾಕಿವೆ ಎಂದು ಹೇಳಿದರು.
ಜಿಲ್ಲಾಡಳಿತದ ಪರವಾಗಿ ಮಾಲಾರ್ಪಣೆ ಮಾಡಿ ಮಾತನಾಡಿದ ಡಿಸಿ ಹರ್ಷಲ್ ಭೋಯರ್, ಪ್ರಜಾಪ್ರಭುತ್ವ ವ್ಯವಸ್ಥೆಗೆ ಡಾ.ಅಂಬೇಡ್ಕರ್ ಅವರು ಅತ್ಯುತ್ತಮ ಸಂವಿಧಾನ ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಉಮೇಶ್ ನಾಯಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಸ್ ಎಸ್ ಚನ್ನಬಸಪ್ಪ, ತಹಶೀಲ್ದಾರ್ ಸುರೇಶ್ ಅಂಕಲಗಿ, ಸಹಾಯಕ ನಿರ್ದೇಶಕರಾದ ಬೆಬಿ ಲಕ್ಷ್ಮಣ ಹುಲಸವಾರ್, ನಿಲಯ ಮೇಲ್ವಿಚಾರಕರಾದ ದೇವಿಂದ್ರಪ್ಪ, ಮುಹಮ್ಮದ್ ಹುಸೇನಿ, ನಿಂಗಣ್ಣ ಸೇರಿ, ಸುನೀಲ್ ಪವಾರ್, ನ್ಯಾಯವಾದಿ ಮಹೇಶ್ ಎಸ್ ಕುರಕುಂಬಳ, ಕುಪೇಂದ್ರ ವಠಾರ್, ಶ್ಯಾಮಸನ್ ಮಾಲಿಕೆರಿ. ಮಲ್ಲಣ್ಣ ದಾಸನಕೆರಿ, ಭೀಮರಾಯ ಬೊಮ್ಮನ್, ಮಲ್ಲಿಕಾರ್ಜುನ್ ಈಟಿ, ಮಹೇಶ್ ಕುರುಕುಂಬಳ, ಕೈಲಾಸ ಅನ್ವರ್, ಶರಣು ನಾಟೇಕರ್, ಸ್ವಾಮಿ ದೇವ್ ದಾಸನ ಕೇರಿ, ಮಂಜುನಾಥ್ ದಾಸನಕೇರಿ, ನಿಂಗಪ್ಪ ಬೀರ್ನಾಳ್, ಭೀಮಪ್ಪ ಕಾಗಿ, ಮಲ್ಲಿಕಾರ್ಜುನ್, ಶ್ರೀಮಂತ ಚಿನ್ನಕರ್, ಗಾಲಿ ಪಟೇಲ್, ಚಂದ್ರಕಾಂತ್ ಚಲವಾದಿ, ಅವಿನಾಶ್ ಅನ್ವರ್, ವಸಂತ್ ಕುಮಾರ್, ಸಂಪತ್ ಕುಮಾರ್, ಮಂಜುನಾಥ್, ಶ್ರೀಕಾಂತ್ ಸುಂಗಲ್ ಉಪಸ್ಥಿತರಿದ್ದರು.