×
Ad

ಯಾದಗಿರಿ| 2.35 ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ

Update: 2025-12-04 18:46 IST

ಯಾದಗಿರಿ: ಬೆಳೆಯುತ್ತಿರುವ ನಗರಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ಒದಗಿಸಲು ತಾವು ಬದ್ಧರಾಗಿದ್ದು, ಮಂಜೂರಾದ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದಲ್ಲಿ ಮುಗಿಸಬೇಕೆಂದು ಶಾಸಕ‌ ಚೆನ್ನಾರಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ವಾರ್ಡ್‌ ನಂ.18ರ ಡಾ.ಅಂಬೇಡ್ಕರ್ ವೃತ್ತದಿಂದ ಮಾರೆಪ್ಪ ಈಟೆ ಮನೆವರೆಗೆ ಸಿಸಿ ರಸ್ತೆ ಮತ್ತು ಯಾದಗಿರಿ ನಗರದ ಸರಕಾರಿ ಬಾಲಕರ ಹಾಸ್ಟೆಲ್ ದಿಂದ ಮಾರೆಮ್ಮ ದೇವಸ್ಥಾನದವರೆಗೆ ಸಿಸಿ ರಸ್ತೆ ಸೇರಿದಂತೆ ನಗರದ ಹಲವೆಡೆಗಳಲ್ಲಿ ಒಟ್ಟು 2 ಕೋಟಿ 35 ಲಕ್ಷ ವೆಚ್ಷದ ಕಾಮಗಾರಿಗಳಿಗೆ ಭೂಮಿ ಪೂಜೆ ‌ನೆರವೆರಿಸಿ ಮಾತನಾಡಿದರು.

ಬಹುಮೊತ್ತದ ವಿವಿಧ ಕಾಮಗಾರಿಗಳು ಮುಗಿದರೇ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮುಂಬರುವ ದಿನಗಳಲ್ಲಿ ನಗರದ ಎಲ್ಲಡೆ ಬೇಕಾದ ಸೌಲಭ್ಯಗಳು ಕಲ್ಪಿಸಲು ರಾಜ್ಯ ಸರಕಾರ, ಕೆಕೆಆರ್ ಡಿಬಿಯಿಂದ ಅನುದಾನ ತರುವುದಾಗಿ ಶಾಸಕರು ಭರವಸೆ ನೀಡಿದರು.

ಈ‌ ವೇಳೆ ಮಲ್ಲಣ್ಣ ದಾಸನಕೇರಿ, ಶ್ಯಾಮಸನ್ ಮಾಳಿಕೇರಿ, ಮಲ್ಲಿಕಾರ್ಜುನ ಈಟೆ, ಲಚಮ ರೆಡ್ಡಿ, ಅಭಿಷೇಕ ದಾಸನಕೇರಿ, ಸಾಯಿಬಣ್ಣ ಕೆಂಗೂರಿ, ಸುರೇಶ ಮಡ್ಡಿ, ತಿಮ್ಮಣ್ಣ ನಾಯಕ್, ಭೀಮಪ್ಪ ಕಾಗೆ, ಮಲ್ಲಯ್ಯ ಕಸಬಿ, ಕೃಷ್ಣಾ ದಾಸನಕೇರಿ, ವಸಂತ ಸುಂಗಲಕರ್, ಪ್ರಶಾಂತ ಸುಂಗಲಕರ್, ಯಾಕುಬ್, ಮಂಜುನಾಥ ದಾಸನಕೇರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News