ಯಾದಗಿರಿ: ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿಹಾಕಿ ಜಮೀನು ಕೆಲಸಕ್ಕೆ ಹೋದ ಸಹಾಯಕಿ!
Update: 2025-08-02 23:57 IST
ಯಾದಗಿರಿ: ಮಕ್ಕಳನ್ನು ಅಂಗನವಾಡಿ ಕೇಂದ್ರದಲ್ಲಿ ಕೂಡಿಹಾಕಿ ಮಾಡಿ ಸಹಾಯಕಿ ಜಮೀನು ಕೆಲಸಕ್ಕೆ ಹೋದ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಬುದೂರ್ ಗ್ರಾಮದ ಕೇಂದ್ರ-1 ರಲ್ಲಿ ನಡೆದಿದೆ.
ಅಂಗನವಾಡಿ ಮುಖ್ಯ ಸಹಾಯಕಿ ಬೇರೆ ಗ್ರಾಮಕ್ಕೆ ಹೋಗುತ್ತಿದ್ದಂತೆ, ಸಹಾಯಕಿ ಸಾವಿತ್ರಮ್ಮ ಎಂಬವರು ಮಕ್ಕಳನ್ನು ಅಂಗನವಾಡಿಯಲ್ಲಿ ಲಾಕ್ ಮಾಡಿ ಜಮೀನು ಕೆಲಸಕ್ಕೆ ಹೋಗಿದ್ದಾರೆ.
ಲಾಕ್ ಆಗಿರುವ ಕೊಠಡಿಯಲ್ಲಿ ಸಿಲುಕಿದ ಮಕ್ಕಳು ಭಯದಿಂದ ಅಳಲು ಆರಂಭಿಸಿದ್ದಾರೆ. ಮಕ್ಕಳು ಅಳುತ್ತಿರುವ ಶಬ್ದ ಕೇಳಿ ಗ್ರಾಮಸ್ಥರು ಅಂಗನವಾಡಿ ಮುಖ್ಯ ಸಹಾಯಕಿಗೆ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಮುಖ್ಯ ಸಹಾಯಕಿ ಆಗಮಿಸಿ ಬಾಗಿಲು ತೆರೆದಿದ್ದಾರೆ. ಮಕ್ಕಳನ್ನು ಅಂಗನವಾಡಿಯಲ್ಲಿ ಹಾಕಿ ಬೀಗ ಹಾಕಿದ ಸಹಾಯಕಿ ಸಾವಿತ್ರಮ್ಮ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.