ಹೈಮಾಸ್ಟ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ; ಎಸ್‌ಐಟಿ ತನಿಖೆಗೆ ನಿಜಲಿಂಗಪ್ಪ ಪೂಜಾರಿ ಆಗ್ರಹ
Update: 2025-11-29 19:47 IST
ಸೈದಾಪುರ: ಜನಸಾಮಾನ್ಯರು ಸರಕಾರಕ್ಕೆ ಸಂದಾಯ ಮಾಡಿದ ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ದುರುಪಯೋಗ ಮಾಡಿರುವ ಅಧಿಕಾರಿಗಳ ವಿರುದ್ಧ ಎಸ್‌ಐಟಿ ತನಿಖೆ ಮಾಡಬೇಕು ಎಂದು ಕರ್ನಾಟಕ ರಾಷ್ಟ್ರೀಯ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ನಿಜಲಿಂಗಪ್ಪ ಪೂಜಾರಿ ಆಗ್ರಹಿಸಿದರು.
ಗುರುಮಠಕಲ್ ಮತಕ್ಷೇತ್ರದ ನಿರ್ಮಾಣವಾದ 226 ಹೈಮಾಸ್ಟ್ ಯೋಜನೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಗುರುವಾರ ಬಾಬು ಜಗಜೀವನರಾಂ ವೃತ್ತದಲ್ಲಿ ಕೆಆರ್‌ಎಸ್ ಪಕ್ಷ ಹಾಗೂ ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಎಸ್.ನಿಜಲಿಂಗಪ್ಪ ಪೂಜಾರಿ ಮಾತನಾಡಿದರು.
ಈ ವೇಳೆ ಜಗನ್ನಾಥ್. ಎಸ್ ಚಿಂತನಹಳ್ಳಿ, ವೀರೇಶ್ ಸಜ್ಜನ್, ಶ್ರೀಶೈಲ ಬಾಗಿಲಿ, ಆಂಜನೇಯ, ವಿಜಯ್ ಕಂದಳ್ಳಿ, ಜಯವಂತ, ಅನುರಾಧ ನಾಗರಬಂಡ, ಕಥಲ್ ಸಾಬ್ ಉಪಸ್ಥಿತರಿದ್ದರು.