ದೇವಾಪುರ-ಆಲ್ದಾಳದಲ್ಲಿ ಲಿಂಕ್ ಲೈನ್ ಕಾಮಗಾರಿ ಆರಂಭ : ಸಾರ್ವಜನಿಕರಿಂದ ಹರ್ಷ
Update: 2025-08-04 18:52 IST
ಸುರಪುರ: ತಾಲ್ಲೂಕಿನ ಆಲ್ದಾಳ ಗ್ರಾಮಕ್ಕೆ ದೇವಾಪುರ ಜೆಸ್ಕಾಂ ಇಲಾಖೆಯ 110 ಕೆ.ವಿ ವಿತರಣಾ ಕೇಂದ್ರ ದಿಂದ ಲಿಂಕ್ ಲೈನ್ ಕಾಮಗಾರಿ ಆರಂಭಗೊಂಡಿದ್ದು, ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಭರದಿಂದ ಸಾಗಿದ್ದು, ರವಿವಾರ ಮಧ್ಯಾಹ್ನ ಕಾಮಗಾರಿ ಸ್ಥಳಕ್ಕೆ ಕೆಪಿಸಿಸಿ ಎಸ್ಟಿ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ದೊರೆ ಭೇಟಿ ನೀಡಿ ಕಾಮಗಾರಿ ಕುರಿತು ಸಂತಸ ವ್ಯಕ್ತಪಡಿಸಿದರು.