ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆ ಎಲ್ಲರೂ ಶ್ರಮಿಸಿ: ವಿಲಾಸ್ ಪಾಟೀಲ್
ಯಾದಗಿರಿ: ಶಾಲೆ ಅಭಿವೃದ್ಧಿ ಶಾಲೆ ಕುಂದು ಕೊರತೆಗಳ ಬಗ್ಗೆ ವಿಚಾರಿಸಿ ಅವುಗಳ ಬಗ್ಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ಮಕ್ಕಳಿಗೆ ದೊರೆಯುವ ಹಾಗೆ ಎಲ್ಲಾ ಪದಾಧಿಕಾರಿಗಳು ಸಹಾಯ ಸಹಕಾರ ನೀಡಬೇಕೆಂದು ಮಾಜಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್ ಹೇಳಿದರು.
ಶರಣ ನಗರ, ಶಹಾಪುರಪೇಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಮ್ ಸಿ ಬುಧವಾರ ರಚನೆ ಮಾಡಲಾಗಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಸದಸ್ಯರ ಒಮ್ಮತದ ಮೇರೆಗೆ ಅಧ್ಯಕ್ಷ ಉಪಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಹಾಗೆಯೇ ಎಲ್ಲರೂ ಶಾಲೆಯ ಅಭಿವೃದ್ಧಿ, ಗುಣಮಟ್ಟ ಶಿಕ್ಷಣ, ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆ ಸರ್ವ ಸದಸ್ಯರು ಹೆಚ್ಚಿನ ಕಾಳಜಿ ವಹಿಸಿ ಮಾದರಿ ಶಾಲೆಯಾಗುವಂತೆ ಜವಾಬ್ದಾರಿಯನ್ನು ಹೊಂದಿ ಕಾರ್ಯಮಾಡಿ ಎಂದು ಸಲಹೆ ನೀಡಿದರು.
ವಲಯ ಶಿಕ್ಷಣ ಸಂಯೋಜಕ ಕಿಶನ್ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಮತ್ತು ಶಾಲೆಯ ಅಧಿಕಾರ ಹಾಗೂ ಕರ್ತವ್ಯವನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಒಳ್ಳೆಯ ಭವಿಷ್ಯ ರೂಪಿಸುವ ಜವಾಬ್ದಾರಿ ಹೊಂದಿರಿ ಎಂದರು, ಬಿ ಆರ್ ಪಿ ವೆಂಕಟರೆಡ್ಡಿ ಎಸ್ ಡಿ ಎಮ್ ಸದಸ್ಯರು, ಹಾಗೂ ಶಾಲೆಯ ಸಿಬ್ಬಂದಿವರ್ಗ ಒಟ್ಟಾಗಿ ಕರ್ತವ್ಯ ನಿರ್ವಹಿಸಿ ಶಾಲೆಯ ಹಾಗೂ ಹೋಗುಗಳ ಬಗ್ಗೆ ಹೆಚ್ಚು ಗಮನ ಹರಿಸಿ ಕಾಪಾಡಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ಮಲ್ಲಪ್ಪ ಮ್ಯಾಗೇರಿ, ಅಧ್ಯಕ್ಷ ಮರಲಿಂಗಪ್ಪ, ಉಪಾಧ್ಯಕ್ಷ ಹಸೀನಾ ಬೇಗಮ್ ಸದಸ್ಯರುಗಳಾದ ಭೀಮಪ್ಪ, ನಾಗರಾಜ, ರೇಣುಕಾ, ದೇವೇಂದ್ರಮ್ಮ, ಸಾಬಣ್ಣ, ಶ್ರೀರಾಜ್, ಯಾಸ್ಮಿನ ಬೇಗಮ್, ಆಫ್ರಿನ್ ಬೇಗಂ, ರೇಣುಕಾ, ಮರಿಯಮ್ಮ, ಜಯಶ್ರೀ, ಲಕ್ಷ್ಮಿ, ಕಾಶಿನಾಥ್, ಪಾರ್ವತಿ, ಕೌಶಲ್ಯ, ತಾಯಮ್ಮ,ಸದಸ್ಯರಾಗಿ ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಮುಖ್ಯಗುರು ಪದ್ಮಾವತಿ. ಶಿಕ್ಷಕಿ ನಜಮಾನ್ಸಾ ಬೇಗಂ, ಲಕ್ಷ್ಮೀಬಾಯಿ, ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು