×
Ad

ಗುರುಮಠಕಲ್ | ಅಜಲಾಪುರ ಗ್ರಾಪಂನಲ್ಲಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ : ವೆಂಕಟೇಶ್‌ ಯಾದವ್ ಆರೋಪ

Update: 2025-08-24 17:44 IST

ಗುರುಮಠಕಲ್: ತಾಲ್ಲೂಕಿನ ಅಜಲಾಪೂರ ಗ್ರಾಪಂನಲ್ಲಿ PMAY (ಪ್ರಧಾನಮಂತ್ರಿ ಆವಾಸ್ ಯೋಜನೆ), ವಸತಿ ಯೋಜನೆಯಡಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ವೆಂಕಟೇಶ್‌ ಯಾದವ್ ಅವರು ಆರೋಪಿಸಿದ್ದಾರೆ.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯನ್ನು ಕುರಿತು ಮಾತನಾಡಿದ ಅವರು, ಅಜಾಲಾಪುರ ಗ್ರಾಮ ಪಂಚಾಯತ್ ನ ಬದ್ದೇಪಲ್ಲಿ ಬದ್ದೇಪಲ್ಲಿ ತಾಂಡ, ತುರುಕನದೋಡ್ಡಿ, ಅಜಲಪೂರ, ಚಲ್ಲೇರಿ, ಗ್ರಾಮಗಳಲ್ಲಿ ನೂತನ ವಸತಿಗಳ ನಿರ್ಮಾಣಕ್ಕಾಗಿ ಆಯ್ಕೆಯಾದ ಫಲಾನುಭವಿಗಳ ಹತ್ತಿರ 20 ಸಾವಿರದಿಂದ 30 ಸಾವಿರ ರೂ. ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬುದು ಫಲಾನುಭವಿಗಳು ಖುದ್ದು ಖಚಿತ ಮಾಹಿತಿ ನೀಡಿದ್ದಾರೆ ಎಂದರು.

ಒಂದು ವೇಳೆ ಹಣ ನೀಡದೆ ಹೋದ ಪಕ್ಷದಲ್ಲಿ ತಮ್ಮ ಹೆಸರನ್ನು ಆಯ್ಕೆಯಾದ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಧಮ್ಕಿ ಹಾಕುತ್ತಿದ್ದಾರೆ‌. ಹಣ ಕೇಳಿದ ವಿಷಯ ಯಾರಿಗೂ ಹೇಳಬಾರದು ಎಂಬ ಷರತ್ತು ಕೂಡ ಹಾಕಿರುತ್ತಾರೆ ಎಂದರು.

ತಕ್ಷಣ ಈ ವಿಷಯದ ಬಗ್ಗೆ ಕ್ರಮವನ್ನು ತೆಗೆದುಕೊಳ್ಳದೆ ಹೋದರೆ ಜಿಲ್ಲಾಧಿಕಾರಿ ಕಚೇರಿ ಎದುರು ಗ್ರಾ.ಪಂ. ಸದಸ್ಯರು ಹಾಗೂ ಸದರಿ ಫಲಾನುಭಾವಿಗಳು ಸೇರಿ ಹೋರಾಟ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ ಸದಸ್ಯರಾದ ಮಹಾದೇವಪ್ಪ, ಮಿರಾನ್, ಶಂಕರಪ್ಪ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News