ಯಾದಗಿರಿ: ʼಹರ್ ಘರ್ ತಿರಂಗಾʼ ಅಭಿಯಾನದ ಪ್ರಯುಕ್ತ ಬೈಕ್ ರ‍್ಯಾಲಿ
ಯಾದಗಿರಿ: ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸಿ ಕೊಟ್ಟಿದ್ದು, ಅದರ ನೆನಪಿಗಾಗಿ ಸರ್ಕಾರ ʼಹರ್ ಘರ್ ತಿರಂಗಾʼ ಕಾರ್ಯಕ್ರಮ ಆಯೋಜಿಸಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬೇಕು ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ತಿಳಿಸಿದರು.
ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ವತಿಯಿಂದ ಹರ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ನಗರದ ಬಸವೇಶ್ವರ ಗಂಜ್ ಸರ್ಕಲ್ ಹತ್ತಿರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮನೆಗಳ ಮೇಲೂ ತಿರಂಗಾ ಧ್ವಜ ಹಾರಾಟ ಮಾಡಬೇಕು. ಸ್ವಾತಂತ್ರೋತ್ಸವದ ಇತಿಹಾಸವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಅಂದಿನ ಜನರ ತ್ಯಾಗ, ಬಲಿದಾನದಿಂದ ನಮಗೆಲ್ಲಾ ಸ್ವಾತಂತ್ರ್ಯ ಲಭಿಸಿದೆ. ಹೋರಾಟಗಳ ಘಟನೆಗಳ ಮಾಹಿತಿ ಮುಂದಿನ ಪೀಳಿಗೆಗೆ ದೊರಕುವಂತೆ ಮಾಡಬೇಕು ಎಂದರು.
ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಮಾತನಾಡಿ ಅವರು ಸಮಾಜ ಅಭಿವೃದ್ಧಿಯಾಗಬೇಕು ಎಲ್ಲರೂ ಉತ್ತಮ ದಾರಿಯಲ್ಲಿ ಸಾಗಬೇಕು. ತಮ್ಮ ಮನೆಗಳ ಮೇಲೆ ಪಕ್ಷ ಭೇದ ಮರೆತು ರಾಷ್ಟ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮುಫಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿದ ಅವರು ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ಅಮೃತ ಮಹೋತ್ಸವ ದಿನದ ಅಂಗವಾಗಿ ಮನೆ ಮನೆಗೆ ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶದ ನಿವಾಸಿಗಳಿಗೆ ಕರೆ ನೀಡಿದ್ದಾರೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ ಮಾತನಾಡಿದ ಅವರು ಜಿಲ್ಲಾ ತುಂಬಾ ಯುವ ಮೋರ್ಚಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಪ್ರತಿ ಜನರಲ್ಲೂ ರಾಷ್ಟ್ರಧ್ವಜದ ಜೊತೆಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ ಮತ್ತು ದೆವಿಂದ್ರಪ್ಪ ಕೊನೇರ, ಮಾರುತಿ ಕಲಾಲ್, ನಗರಸಭೆ ಉಪಾಧ್ಯಕ್ಷೆ ರುಕೀಯ್ ಬೇಗಂ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅಜೇಯ್ ಮಡ್ಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಶ್ರೀದೇವಿ ಶೆಟ್ಟಹಳ್ಳಿ,ಕೃಷ್ಣಮೂರ್ತಿ ಕುಲಕರ್ಣಿ,ಭೀಮಣ್ಣಗೌಡ ಖ್ಯಾತನಾಳ,ನಗರಸಭೆ ಸದಸ್ಯ ವಿಲಾಸ ಪಾಟೀಲ್ ಮತ್ತು ಸುರೇಶ್ ಅಂಬಿಗೇರ, ಸೇರಿದಂತೆ ಯುವ ಮೋರ್ಚಾ ಪದಾಧಿಕಾರಿಗಳ ಕಾರ್ಯಕರ್ತರು ಭಾಗಿಯಾಗಿದರು.