×
Ad

ಮನಗನಾಳ- ಖಾನಾಪುರ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ

Update: 2025-03-16 15:42 IST

ಯಾದಗಿರಿ : ನಿಗದಿತ ಅವಧಿಯಂತೆಯೇ ಆರು ತಿಂಗಳಲ್ಲಿಯೇ ಗುಣಮಟ್ಟದಲ್ಲಿ ಈ ಕಾಮಗಾರಿ ಮುಗಿಸಬೇಕೆಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಸೂಚಿಸಿದರು.

ಭಾನುವಾರ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಹೆದ್ದಾರಿ -15ರ (ವನಮಾರಪಳ್ಳಿ- ರಾಯಚೂರು) ಮನಗನಾಳದಿಂದ ಖಾನಾಪುರದವರೆಗಿನ ಅಂದಾಜು 4 ಕಿಮೀ ರಸ್ತೆ ಮರುಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

2023-24ನೇ ಸಾಲಿನ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ ಯೋಜನೆಯ 3.60 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದರಿಂದ ಶಹಾಪುರದಿಂದ ಯಾದಗಿರಿ ಮತ್ತು ಖಾನಾಪುರದಿಂದ ಮನಗನಾಳ ಗ್ರಾಮಸ್ಥರಿಗೆ ಸಂಚಾರಕ್ಕೆ ಭಾರಿ ಅನುಕೂಲವಾಗಲಿದೆ ಎಂದರು.

ಹಳ್ಳಿಗಳ ಅಭಿವೃದ್ಧಿಗೆ ಮುಖ್ಯವಾಗಿ ಸುಗಮ ಸಂಚಾರ ರಸ್ತೆಗಳು ಬೇಕು. ಈ ನಿಟ್ಟಿನಲ್ಲಿ ತಾವು ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ಮತ್ತು ಕೆಕೆಆರ್ ಡಿಬಿಯಿಂದ ಅನುದಾನ ತಂದು ಕೆಲಸ‌ ಮಾಡುವ ಮೂಲಕ ಜನರಿಗೆ ಎಲ್ಲ ರೀತಿಯಿಂದ ಅನುಕೂಲ ಮಾಡಿಕೊಡುವುದಾಗಿ ಶಾಸಕರು ಹೇಳಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಳಹಾರ, ದೇವಿಂದ್ರಪ್ಪ, ಬಂಗಾರಪ್ಪ, ಹೊನ್ನಪ್ಪ, ತಿಪ್ಪಾರಡ್ಡಿ, ಪರಶುರಾಮ್, ಶರಣಪ್ಪ ಎಇಇ ರಾಮು, ರಾಜು ಆಸನಾಳ, ಗುತ್ತೀಗೆದಾರ ಚಂದ್ರಯ್ಯ ದೇವಣಗಾಂವ್ ಸೇರಿದಂತೆಯೇ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News