ಮನ್ ಕೀ ಬಾತ್‌ನಲ್ಲಿ ʼಕಲಬುರಗಿ ಖಡಕ್ ರೊಟ್ಟಿʼ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ ; ಶ್ರೀಧರ ಸಾಹುಕಾರ ಹರ್ಷ
ಯಾದಗಿರಿ: ನಮ್ಮ ಹೆಮ್ಮೆಯ ಉತ್ತರ ಕರ್ನಾಟಕದ ಕಲಬುರಗಿ ಜಿಲ್ಲೆಯ ಜೋಳದ ರೊಟ್ಟಿಗಳನ್ನು ಇಂದು ಪ್ರಸಿದ್ಧ ಬ್ರ್ಯಾಂಡ್ ಆಗಿ ಪರಿವರ್ತಿಸಿ ಪ್ರತಿದಿನ 3,000 ಕ್ಕೂ ಹೆಚ್ಚು ರೊಟ್ಟಿಗಳನ್ನು ಉತ್ಪಾದಿಸುತ್ತಿರುವ ಕಲಬುರಗಿಯ ಮಹಿಳೆಯ ಸಾಹಸಗಾಥೆಯ ಕುರಿತು ಪ್ರಧಾನ ಮಂತ್ರಿ ಮೋದಿಜಿ ಅವರು ಮನ್ ಕೀ ಬಾತ್ ನಲ್ಲಿ ಇಂದು ಮಾತನಾಡಿದ್ದು, ಜೀವನವನ್ನು ಘನತೆ ಮತ್ತು ಸ್ವಾವಲಂಬನೆಯಿಂದ ಪರಿವರ್ತಿಸಿರುವ ಮಹಿಳೆ ದೇಶಕ್ಕೆ ಮಾದರಿ ಎಂದು ಶ್ಲಾಘಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ "ಮನ್ ಕೀ ಬಾತ್ " ಕಾರ್ಯಕ್ರಮದ 123ನೇ ಸಂಚಿಕೆಯನ್ನು ಇಂದು ಯಾದಗಿರಿ ವಿಧಾನಸಭಾ ಕ್ಷೇತ್ರದ ಪಾಗಲಾಪುರ ಬೂತ್ ಸಂಖ್ಯೆ 114ರಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಕಾರ್ಯಕರ್ತರೊಡಗೂಡಿ ವೀಕ್ಷಿಸಿದರು..
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಲ್ಲು ಕೋಲಿವಾಡ, ಮಂಜುನಾಥ ಗುತ್ತೇದಾರ, ವಿಕಾಶ ಚವ್ಹಾಣ, ಸುನಿಲ್ ಕಡೆಚೂರ, ಶಿವು ಗುತ್ತೇದಾರ, ಶರಣು, ಸಿದ್ದು, ಮೌನೇಶ್, ಮಲ್ಲಿಕಾರ್ಜುನ, ಕಾಂತು ಪಾಟೀಲ್ ಸೇರಿದಂತೆ ಗ್ರಾಮದ ಹಿರಿಯರು ಮುಖಂಡರು ಉಪಸ್ಥಿತರಿದ್ದರು.