ಯಾದಗಿರಿ | ಶಿಥಿಲಗೊಂಡಿರುವ ಕಿಲ್ಲನಕೇರಾ ಕೆರೆ ಕೋಡಿ: ರೈತರಿಂದ ಪ್ರತಿಭಟನೆ
ಯಾದಗಿರಿ: ಜಿಲ್ಲಾಡಳಿತ ಭವನದಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ತಾಲ್ಲೂಕಿನ ಕಿಲ್ಲನಕೇರಾ ಗ್ರಾಮದ ಕೆರೆಯ ಕೋಡಿ ಮೂರು ವರ್ಷಗಳ ಹಿಂದೆ ಸುರಿದ ದಾರಕಾರ ಮಳೆಗೆ ಸಂಪೂರ್ಣ ಶಿಥಿಲಗೊಂಡಿದ್ದು, ಅಪಾಯದ ಸ್ಥಿತಿಯಲ್ಲಿ ರೈತರಿಗೆ ಆತಂಕ ತಂದೊಡ್ಡಿದೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಈ ಕೆರೆನೇ ನಂಬಿ ರೈತರು ಕೆರೆ ಕೆಳಭಾಗದಲ್ಲಿ ನೂರಾರು ಎಕ್ಕರೆ ಭತ್ತ ನಾಟಿ ಮಾಡಿದ್ದು ನಿರಂತರ ಮಳೆಯಿಂದ ತಾಲೂಕಿನ ಎಲ್ಲಾ ಕೆರೆಗಳು ತುಂಬಿ ತುಳಕುತ್ತಿವೆ. ಆದರೆ ಕಿಲ್ಲನಕೇರಾ ಗ್ರಾಮದ ಈ ಕೆರೆ ಕೋಡಿ ಹೊಡೆದು ಹೋಗಿರುವುದರಿಂದ ನಿರಂತರ ನೀರು ಪೋಲಾಗುತ್ತಿದ್ದು, ರೈತರು ಚೀಲಗಳಲ್ಲಿ ಮರಳು ತುಂಬಿ ನೀರು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅದಕ್ಕೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಲ್ಲನಕೇರಾ ಗ್ರಾಮದ ಜೀವನಾಡಿಯಾಗಿರುವ ಕೆರೆ ಕಳೆದ 3 ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದೆ. ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ಕೋಡಿ ನೀರು ನಿರಂತರ ನೀರು ಪೋಲಾಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಈ ಗೋಡೆ ಸಂಪೂರ್ಣ ಶಿಥಿಲವಾಗಿ ಬಿದ್ದು ಹೋಗಿದೆ. ಕೆರೆಯ ನಿರ್ವಹಣೆ ಜವಾಬ್ದಾರಿ ಹೊಂದಿರುವ ಸಣ್ಣ ನೀರಾವರಿ (ಜಲ ಸಂಪನ್ಮೂಲ) ಇಲಾಖೆ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತೆ ಆಗಿರುವುದಕ್ಕೆ ಈ ಕೆರೆಗೆ ಈ ದುಸ್ಥಿತಿ ಬಂದೊದಗಿದೆ ಎಂದು ಉಮೇಶ ಮುದ್ನಾಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲಾಖೆ ಪ್ರತಿವರ್ಷ ತನ್ನ ವ್ಯಾಪ್ತಿಯ ಕೆರೆಗಳ ಸ್ಥಿತಿಗತಿಯನ್ನು ಅವಲೋಕಿಸಬೇಕು ಮತ್ತು ಅಗತ್ಯ ದುರಸ್ತಿ ಮತ್ತು ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಬೇಕು. ಆದರೆ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ನಡೆಯಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಮರೆಪ್ಪ ನಾಟೇಕಾರ, ಹಣಮಂತ ಧೋತ್ರೆ, ಬನ್ನಪ್ಪ ಬಾವೂರ್( ಮಚ್ಚೆ), ದೇವಪ್ಪ ನಾಟೇಕಾರ್, ಬಸವರಾಜ ಬಾವೂರ್ ಟೆಂಟ್ ಹೌಸ್, ಯಂಕಪ್ಪ ಹೊಸಮನಿ, ಬನ್ನಪ್ಪ ಹೊಸಮನಿ, ದೊಡ್ಡಯಂಕಪ್ಪ ಬಾವೂರ,ಮೋದಿಸಾಬ್ ಬುಗಟಗೇರ್, ಮೋದಿನಸಾಬ್ ಫೈಲ್ದೋರ್, ಆನಂಪಲ್ಲಿ ಬಸವರಾಜ, ಆನಂಪಲ್ಲಿ, ಲಕ್ಷ್ಮಣ ಬೀರಪ್ಪ ಬೂದಿನಾಲ, ಮಲ್ಲಪ್ಪ ಹೊಟ್ಟೆ, ಕಾಸಿಂ ಹೋಟೇಲ್, ಖಾಜಪ್ಪ ಪಿಂಜಾರ್, ಸಣ್ಣ ಯಂಕಪ್ಪ ಬಾವೂರ್, ಸಾಬಣ್ಣ ಎಸ್ಪಿ ಬಾವೂರ್, ನರಸಪ್ಪ ಆಶಪ್ಪನ್ನೋರ್, ಬಾಬು ಪಡಸಾಲಿ, ಮಾರೆಪ್ಪ ಎದ್ದೇರಿ, ಮಹಿಬೂಬ್ ಬಂಗ್ಲಿ, ಮೈಬೂ ಪಿಂಜಾರ್, ದೇವಪ್ಪ ಕೊನೆಮನಿ, ಈಶಪ್ಪ ಶೇಕಸಿಂದಿ, ಖಾಜಪ್ಪ ಬುಗಟಿಗೇರ್, ದೊಡ್ಡ ಕಿಷ್ಟಪ್ಪ, ಬಲವಂತ, ಕುರುಬರ್, ಭೀಮಪ್ಪ ಕುರುಬರ್, ಬೀರಲಿಂಗಪ್ಪ ಎದ್ದೇರಿ, ಸದ್ದಾಂ ಕತ್ತನ್ನೋರ್, ಸಿದ್ರಾಮ್ ಬಸಲಿಂಗಪ್ಪ ಯಾದಗಿರ್, ಮಲ್ಲಪ್ಪ ಕುರುಬರ್, ಹುಸೇನ್ ಕಂಬಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.